ನವದೆಹಲಿ :ಸಿಯಾಚಿನ್ ಹಿಮನದಿಯನ್ನು ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ನಿವೃತ್ತ ಅಧಿಕಾರಿ ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ಅವರ ಅಗಲಿಕಿಗೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಂತಾಪ ಸೂಚಿಸಿದರು.
ನರೇಂದ್ರ ‘ಬುಲ್’ ಕುಮಾರ್ ಅವರ ಎತ್ತರದ ಪರ್ವತ ಶಿಖರಗಳನ್ನು ಅಳೆಯುವ ದೃಢ ನಿಶ್ಚಯ ಮತ್ತು ಹಂಬಲ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡಿದೆ. ಅವರ ಆವಿಷ್ಕಾರಗಳು ಸೈನ್ಯಕ್ಕೆ ಸಹಾಯ ಮಾಡಿತು ಎಂದು ಜನರಲ್ ಬಿಪಿನ್ ರಾವತ್ ಹೇಳಿದರು.