ನವದೆಹಲಿ:ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಈ ಹಿಂದೆ ಇದೇ ತೆರನಾದ ಕಾಪ್ಟರ್ ಪತನವಾದರೂ ಬದುಕುಳಿದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
2015ರಲ್ಲಿ ಬಿಪಿನ್ ರಾವತ್ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದ ಅವಧಿಯಲ್ಲಿ ಚಾಪರ್ ಹೆಲಿಕಾಪ್ಟರ್ನಲ್ಲಿ ನಾಗಾಲ್ಯಾಂಡ್ನ ದಿಮಾಪುರ್ ಜಿಲ್ಲೆಯ ರಬ್ಗಾಪಹರ್ ಹೆಲಿಪ್ಯಾಡ್ನಿಂದ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹೆಲಿಕಾಪ್ಟರ್ ಹಾರಾಟ ಶುರು ಮಾಡಿದ ಕೆಲವೇ ಸೆಕೆಂಡುಗಳಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿತ್ತು.
ಸೇನಾ ಸಮವಸ್ತ್ರದಲ್ಲಿ ಬಿಪಿನ್ ರಾವತ್ ಈ ವೇಳೆ ಹೆಲಿಕಾಪ್ಟರ್ನಲ್ಲಿದ್ದ ಬಿಪಿನ್ ರಾವತ್ ಮತ್ತು ಮೂವರು ಸೇನಾ ಸಿಬ್ಬಂದಿ ಹೆಲಿಕಾಪ್ಟರ್ ಭೂಮಿಗೆ ಅಪ್ಪಳಿಸುವ ಮುನ್ನವೇ 20 ಅಡಿ ಎತ್ತರದಿಂದ ಹಾರಿ ಗಾಯಗೊಂಡರೂ ಪ್ರಾಣ ಉಳಿಸಿಕೊಂಡಿದ್ದರು.
ಇದನ್ನೂ ಓದಿ: ಭಾರತೀಯ ಸೇನಾಪಡೆಯಲ್ಲಿ ಹೊಸ ಅಧ್ಯಾಯ ಬರೆದ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್
ಇದೀಗ ತಮಿಳುನಾಡಿನಲ್ಲಿ ನಡೆದ ದುರಂತದಲ್ಲಿ ಇದೇ ಚಾಪರ್ ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದ ಬಿಪಿನ್ ರಾವತ್ ಅವರು ದುರಂತ ಅಂತ್ಯ ಕಂಡಿದ್ದಾರೆ.
ಬಿಪಿನ್ ರಾವತ್ರ ಸಾಹಸಗಳು
- ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಈಶಾನ್ಯ ಭಾಗದಲ್ಲಿ ಉಂಟಾಗಿದ್ದ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದರು.
- ತಂಟೆಕೋರ ಚೀನಾ ಸೇನೆ ಪದೇಪದೆ ಗಡಿ ದಾಟಿ ಬಂದು ಉಪಟಳ ಮೆರೆದಾಗ ತಕ್ಕ ಪ್ರತ್ಯುತ್ತರ ನೀಡಿ ಚೀನಾಗೆ ಬುದ್ಧಿ ಕಲಿಸಿದ್ದರು.
- 2015ರಲ್ಲಿ ಮ್ಯಾನ್ಮಾರ್ನಲ್ಲಿ ನಡೆದ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು ಬಿಪಿನ್ ರಾವತ್.
- 2016ರಲ್ಲಿ ಉರಿ ಬೇಸ್ ಕ್ಯಾಂಪ್ ಮೇಲೆ ಭಯೋತ್ಪಾದಕ ದಾಳಿಯ ನಂತರ ರೂಪಿಸಿದ ಸರ್ಜಿಕಲ್ ಸ್ಟ್ರೈಕ್ಗಳ ಯೋಜನೆಯ ಭಾಗವಾಗಿದ್ದರು.
- ಪಾಕಿಸ್ತಾನದ ಪ್ರದೇಶಗಳ ಮೇಲೆ ಭಾರತದ ಪಡೆಗಳು ನುಗ್ಗಿ ದಾಳಿ ನಡೆಸಿದಾಗ ರಾವತ್ ನವದೆಹಲಿಯ ಸೌತ್ ಬ್ಲಾಕ್ನಿಂದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದರು.