ಕರ್ನಾಟಕ

karnataka

ETV Bharat / bharat

ಜನರಲ್‌ ಬಿಪಿನ್‌ ರಾವತ್‌ ಅವರಿದ್ದ ಹೆಲಿಕಾಪ್ಟರ್‌ ಎಷ್ಟು ಸುರಕ್ಷಿತ? ವಿಶೇಷತೆಗಳೇನು? ಸಂಪೂರ್ಣ ವಿವರ - ಕೂನುರು ಬಳಿ ಸೇನಾ ಹೆಲಿಕ್ಟಾಪರ್‌ ಪತನ

ವಿಶ್ವದ ಅತ್ಯುತ್ತಮ ದರ್ಜೆಯ ಹೆಲಿಕಾಪ್ಟರ್‌ಗಳಲ್ಲಿ ಒಂದಾದ ಈ ಮೆಟಲ್‌ವಿಂಗ್ ಬಹು ಅಗತ್ಯತೆಗಳನ್ನು ಪೂರೈಸುತ್ತದೆ. ರಾಷ್ಟ್ರಪತಿ, ಪ್ರಧಾನಿ ಮುಂತಾದ ಅತಿ ಗಣ್ಯರ ಪ್ರಯಾಣಕ್ಕೂ ಇದನ್ನು ಬಳಸಲಾಗುತ್ತದೆ. ಜಗತ್ತಿನ ಸುಮಾರು 60 ದೇಶಗಳು ಎಂಐ-17ವಿ5 ಹೆಲಿಕಾಪ್ಟರ್‌ಗಳನ್ನು ಬಳಸುತ್ತಿವೆ.

cds bipin rawat mi17v5 helicopter is very safe
ಸಿಡಿಎಸ್‌ ಬಿಪಿನ್‌ ರಾವತ್‌ ಅವರಿದ್ದ ಹೆಲಿಕಾಪ್ಟರ್‌ ಎಷ್ಟು ಸೇಫ್‌? ಇದರ ವಿಶೇಷಗಳು

By

Published : Dec 9, 2021, 1:08 PM IST

ನವದೆಹಲಿ:ದೇಶದ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿ 13 ಮಂದಿಯ ದಾರುಣ ಸಾವಿಗೆ ಕಾರಣವಾದ ರಷ್ಯಾ ನಿರ್ಮಿತ ಎಂಐ-17ವಿ5 ಹೆಲಿಕಾಪ್ಟರ್‌ನಲ್ಲಿ ಏನಾದರೂ ದೋಷವಿದೆಯೇ? ಎಂಬುದು ಈಗ ಚರ್ಚೆ ಹುಟ್ಟುಹಾಕಿದೆ. ಆದರೆ, ಪತನಗೊಂಡ MI-17V5 ವಿಶ್ವಾಸಾರ್ಹವಾಗಿದೆ ಎಂದು ಸೇನಾ ತಜ್ಞರು ಹೇಳುತ್ತಾರೆ.

ವಿಶ್ವದ ಅತ್ಯುತ್ತಮ ದರ್ಜೆಯ ಹೆಲಿಕಾಪ್ಟರ್‌ಗಳಲ್ಲಿ ಒಂದಾದ ಈ ಮೆಟಲ್‌ವಿಂಗ್ ಬಹು ಅಗತ್ಯತೆಗಳನ್ನು ಪೂರೈಸುತ್ತದೆ. ರಾಷ್ಟ್ರಪತಿ, ಪ್ರಧಾನಿ ಮುಂತಾದ ಅತಿ ಗಣ್ಯರ ಪ್ರಯಾಣಕ್ಕೂ ಇದನ್ನು ಬಳಸಲಾಗುತ್ತದೆ. ಜಗತ್ತಿನ ಸುಮಾರು 60 ದೇಶಗಳು ಎಂಐ-17ವಿ5 ಹೆಲಿಕಾಪ್ಟರ್‌ಗಳನ್ನು ಬಳಸುತ್ತಿವೆ.

ರಷ್ಯಾದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಕಜಾನ್‌ ಎಂಐ-17ವಿ5 ಮಧ್ಯಮ ಶ್ರೇಣಿಯ ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತದೆ. ಇದು ಎಂಐ-8 ಮುಂದುವರಿದ ಅತ್ಯಾಧುನಿಕ ಹೆಲಿಕಾಪ್ಟರ್‌ ಆಗಿದೆ.

ಈ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ತನ್ನ ಮಿತ್ರರಾಷ್ಟ್ರ ರಷ್ಯಾದೊಂದಿಗೆ ಭಾರತ 2008ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಮೊದಲು 80 ಕಾಪ್ಟರ್‌ಗಳಿಗೆ ಬೇಡಿಕೆ ನೀಡಿತ್ತು. ನಂತರ ಅವುಗಳ ಸಂಖ್ಯೆಯನ್ನು 151ಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲಾ ಕಾಪ್ಟರ್‌ಗಳು 2012ರಲ್ಲಿ ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಿದವು. ಎತ್ತರದ ಪರ್ವತಗಳಿಗೆ ಸೈನಿಕರು ಮತ್ತು ಸರಕುಗಳನ್ನು ಸಾಗಿಸಲು ಇವು ತುಂಬಾ ಉಪಯುಕ್ತವಾಗಿದ್ದು, ಆಧುನಿಕ ಕಾಕ್‌ಪಿಟ್‌ಗಳನ್ನು ಹೊಂದಿವೆ.

ಎಂಐ 17 ವಿ5 ವಿಶೇಷತೆಗಳು:

  • MI-17 V5 ಪೈಲಟ್‌ಗಳಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಒದಗಿಸಲು 4 ಮಲ್ಟಿಫಂಕ್ಷನ್ ಡಿಸ್‌ಪ್ಲೇಗಳು ಹಾಗೂ ಸುಧಾರಿತ ದಿಕ್ಸೂಚಿ ವ್ಯವಸ್ಥೆ ಹೊಂದಿದೆ.
  • ಹವಾಮಾನ ಪರಿಸ್ಥಿತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕುವ ರಾಡರ್‌. ರಾತ್ರಿ ವೇಳೆ ವೀಕ್ಷಣೆಗಾಗಿ ಸುಧಾರಿತ ದೃಷ್ಟಿ ಪರಿಕರಗಳು. ಸುಧಾರಿತ ಕೆಎನ್‌ಇಐ-8 ಏವಿಯಾನಿಕ್ಸ್ ವ್ಯವಸ್ಥೆ
  • ಪ್ರಯಾಣದ ವೇಳೆ ಪೈಲಟ್‌ ವಿಶ್ರಾಂತಿಗಾಗಿ ಪಿಕೆವಿ-8 ಆಟೋಪೈಲಟ್ ವ್ಯವಸ್ಥೆ
  • ಹೆಲಿಕಾಪ್ಟರ್ ಹಗಲು ರಾತ್ರಿ ಎಂಬ ಭೇದವಿಲ್ಲದೆ ಕಾರ್ಯನಿರ್ವಹಣೆಯ ಸಮಾರ್ಥ್ಯ
  • ಪ್ರತಿಕೂಲ ವಾತಾವರಣದಲ್ಲಿಯೂ ಮಧ್ಯಮ ಮಟ್ಟವು ನ್ಯಾವಿಗೇಟ್ ಮಾಡಬಹುದು.
  • ಸಮತಟ್ಟಲ್ಲದ ನೆಲದ ಮೇಲೆ ರಾತ್ರಿಯೂ ಇಳಿಯುವ ಸಾಮರ್ಥ್ಯ
  • ಸೇನಾ ಸಿಬ್ಬಂದಿ, ಸರಕುಗಳ ಸಾಗಣೆ. ಅಗತ್ಯಕ್ಕೆ ಅನುಗುಣವಾಗಿ ಹೆಲಿಕಾಪ್ಟರ್ ಹೊರಭಾಗದಲ್ಲಿ ವಸ್ತುಗಳನ್ನು ನೇತು ಹಾಕಿಕೊಂಡು ದೂರದವರೆಗೆ ಸಾಗಿಸಬಹುದು
  • ಶತ್ರು ದೇಶದ ಭೂಭಾಗದಲ್ಲಿ ದಾಳಿ ಮಾಡಲು ಕಮಾಂಡೋಗಳನ್ನು ಆಗಸದಿಂದ ಬಿಡಬಹುದು.

ಅಭೇದ್ಯವಾದ ಶಕ್ತಿ

  • ಇಂಧನ ಟ್ಯಾಂಕ್‌ನಿಂದ ಯಾವುದೇ ಅಪಾಯ ಸಂಭವಿಸದಂತೆ ಪಾಲಿಯುರೆಥೇನ್ ಎಂಬ ಸಿಂಥೆಟಿಕ್ ಫೋಮ್ ಇಂಧನ ಟ್ಯಾಂಕ್‌ಗೆ ರಕ್ಷಣೆ
  • ಕಾಕ್‌ಪಿಟ್‌, ಪ್ರಮುಖ ಸಿಸ್ಟಮ್‌ಗಳು, ಉಪಕರಗಳನ್ನು ರಕ್ಷಿಸಲು ದೃಢವಾದ ಕವಚ
  • ಸಿಬ್ಬಂದಿ ಸಂಖ್ಯೆ: 3
  • ಗರಿಷ್ಠ ಸಾಗಿಸುವ ತೂಕ 4,500 ಕೆಜಿ. ಸುಮಾರು 36 ಶಸ್ತ್ರಸಜ್ಜಿತ ಸೈನಿಕರನ್ನು ಹೊತ್ತೊಯ್ಯಬಲ್ಲದು.
  • ಗರಿಷ್ಠ ವೇಗ: ಗಂಟೆಗೆ 250 ಕಿಲೋಮೀಟರ್
  • ವ್ಯಾಪ್ತಿ: 580 ಕಿಲೋಮೀಟರ್ (ಸಹಾಯಕ ಇಂಧನ ಟ್ಯಾಂಕ್‌ಗಳೊಂದಿಗೆ 1,065 ಕಿಮೀ ವರೆಗೆ ಹೆಚ್ಚಿಸಬಹುದು)
  • ಎಂಜಿನ್‌ಗಳು: 2 (ಕ್ಲಿಮೋವ್ ಟಿವಿ3-117ವಿಎಂ)
  • 6 ಸಾವಿರ ಮೀಟರ್‌ನಷ್ಟು ಎತ್ತರಕ್ಕೆ ಹೋಗಬಹುದಾದ ಸಾಮರ್ಥ್ಯ

ಇದನ್ನೂ ಓದಿ:ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರಿಗೆ ಸಂಸತ್ತಿನ ಉಭಯ ಸದನದಲ್ಲಿ ಸಂತಾಪ; ಉನ್ನತ ಮಟ್ಟದ ತನಿಖೆಗೆ ಆದೇಶ

ABOUT THE AUTHOR

...view details