ಗುರುಗ್ರಾಮ್ (ಹರಿಯಾಣ):ದೌಲತಾಬಾದ್‌ನಲ್ಲಿ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಬಿದ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಲ್ಲಿ ಫ್ಲೈಓವರ್‌ನ ಕೆಲವು ಭಾಗಗಳು ಹೇಗೆ ಕುಸಿದಿವೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.
ಫ್ಲೈಓವರ್‌ನ ಮೇಲೆ ಇಬ್ಬರು ಚಲಿಸುತ್ತಿರುತ್ತಾರೆ. ಕೆಲವೇ ಕ್ಷಣಗಳಲ್ಲಿ ಫ್ಲೈಓವರ್‌ನ ಚಪ್ಪಡಿ ಬೀಳುವುದನ್ನು ನಾವು ಸ್ಪಷ್ಟವಾಗಿ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರ ಕೂಡ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡಿದ್ದಾನೆ. ಈ ಒಂದು ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುಗ್ರಾಮ್‌ದಲ್ಲಿ ಫ್ಲೈಓವರ್ ಬೀಳುತ್ತಿರುವ ದೃಶ್ಯ ಓದಿ:ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳ ತನಿಖೆ : ಸಿಎಂ ಠಾಕ್ರೆ ನಿರ್ಧಾರ
ಇಂದು ಬೆಳಗ್ಗೆ 7: 30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಈವರೆಗೆ ಮೂವರು ಗಾಯಗೊಂಡಿದ್ದಾರೆ, ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಜನರು ಹೇಳುವ ಪ್ರಕಾರ, ಈ ಫ್ಲೈಓವರ್‌ನ ಕೆಲವು ಭಾಗ ಬಿದ್ದಾಗ, ತುಂಬಾ ದೊಡ್ಡ ಶಬ್ದ ಕೇಳಿಬಂತು. ಆಗ ನಾವೆಲ್ಲಾ ಭಯಭೀತರಾದೆವು ಎಂದಿದ್ದಾರೆ.
ಆದರೆ ಗುರುಗ್ರಾಮ್‌ದಲ್ಲಿ ಫ್ಲೈಓವರ್ ಬೀಳುವ ಪ್ರಕರಣ ಇದೇ ಮೊದಲೇನಲ್ಲ. ಡಿ.17, 2018 ರಂದು ಇದೇ ರೀತಿ ಸೇತುವೆಯೊಂದು ಹಾನಿಗೊಳಗಾಗಿತ್ತು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಇದಾದ ನಂತರ, ಪ್ಲಾಸ್ಟರ್ ತುಂಡೊಂದು 2019 ರ ಜುಲೈ 18 ರಂದು ಸೇತುವೆಯ ಕೆಳಗಿನಿಂದ ಬಿದ್ದಿತ್ತು.