ಕರ್ನಾಟಕ

karnataka

ETV Bharat / bharat

ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಸಿಡಿದ ಕ್ರ್ಯಾಕರ್ಸ್​.. ತಂದೆ-ಮಗ ಸಜೀವದಹನ - Video - ತಮಿಳುನಾಡಿನಲ್ಲಿ ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಪಟಾಕಿ ಸಿಡಿದು ತಂದೆ-ಮಗ ಸಾವು

ಗೋಣಿಚೀಲದಲ್ಲಿ ಪಟಾಕಿಗಳನ್ನು ತುಂಬಿಕೊಂಡು ಬೈಕ್​ನಲ್ಲಿ ಹೋಗುವಾಗ ಕ್ರ್ಯಾಕರ್ಸ್ ಹೊತ್ತಿ ಉರಿದಿವೆ. ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ತಂದೆ ಮತ್ತು ಮಗ ಸಜೀವ ದಹನವಾಗಿರುವ ಘಟನೆ ಪುದುಚೇರಿಯಲ್ಲಿ ಸಂಭವಿಸಿದೆ.

ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಪಟಾಕಿ ಸಿಡಿದು ತಂದೆ-ಮಗ ಸಾವು
ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಪಟಾಕಿ ಸಿಡಿದು ತಂದೆ-ಮಗ ಸಾವು

By

Published : Nov 5, 2021, 1:43 PM IST

Updated : Nov 5, 2021, 2:06 PM IST

ಪುದುಚೇರಿ: ಪಟಾಕಿಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬೈಕ್​ನಲ್ಲಿ ತೆರಳುತ್ತಿದ್ದಾಗ ಅವು ದಿಢೀರ್​ ಹೊತ್ತಿ ಉರಿದ ಪರಿಣಾಮ, ಬೈಕ್​ನಲ್ಲಿ ಸಾಗುತ್ತಿದ್ದ ತಂದೆ ಮತ್ತು ಆತನ 7 ವರ್ಷದ ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ನಡೆದಿದೆ.

ಪುದುಚೇರಿಯ ಅರಿಯಂಕುಪ್ಪಂ ಪಟ್ಟಣದ ನಿವಾಸಿ ಕಲೈನೇಸನ್ (32) ಹಾಗೂ ಆತನ 7 ವರ್ಷದ ಮಗ ಮೃತರು. ಕಲೈನೇಸನ್ ಗುರುವಾರ ಮರಕ್ಕನಂನಿಂದ ಎರಡು ಗೋಣಿಚೀಲಗಳಲ್ಲಿ ಪಟಾಕಿಗಳನ್ನು ತೆಗೆದುಕೊಂಡು ತಮ್ಮ 7 ವರ್ಷದ ಮಗನೊಂದಿಗೆ ಪುದುಚೇರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಪಟಾಕಿ ಸಿಡಿದು ತಂದೆ-ಮಗ ಸಾವು

ಪಟಾಕಿ ಸಿಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ತಂದೆ-ಮಗ ಸಜೀವದಹನ

ಈ ದುರ್ಘಟನೆಯಲ್ಲಿ ಲಾರಿ ಮತ್ತಿತರ ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ವಿಲ್ಲುಪುರಂ ಜಿಲ್ಲಾ ಮತ್ತು ಪುದುಚೇರಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Last Updated : Nov 5, 2021, 2:06 PM IST

ABOUT THE AUTHOR

...view details