ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಡಿವೈಸ್ನ ಪರಿಸರ ವ್ಯವಸ್ಥೆಯ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಟೆಕ್ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ಸ್ಪರ್ಧಾ ಆಯೋಗ (Competition Commission)ವು ಗುರುವಾರ 1,337.76 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ), ಗೂಗಲ್ ಪ್ಲೇ ಸ್ಟೋರ್ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ (MADA) ಮತ್ತು ಆಂಟಿ ಫ್ರಾಗ್ಮೆಂಟೇಶನ್ ಅಗ್ರಿಮೆಂಟ್ (AFA) ಉಲ್ಲಂಘನೆಗಾಗಿ ದಂಡ ಹಾಕಲಾಗಿದೆ. ಜೊತೆಗೆ, ಗೂಗಲ್ ತನ್ನ ನಡವಳಿಕೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಿಸಿಕೊಳ್ಳುವಂತೆಯೂ ಸೂಚಿಸಿದೆ.