ನವದೆಹಲಿ:2022ರ ಏಪ್ರಿಲ್ 26ರಿಂದ 10 ಮತ್ತು 12ನೇ ತರಗತಿಗಳಿಗೆ ಎರಡನೇ ಅವಧಿ (ಟರ್ಮ್-II) ಪರೀಕ್ಷೆ ನಡೆಸಲು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರ್ ಬೋರ್ಡ್ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿದೆ.
ಈ ಸಲದ ಪರೀಕ್ಷೆ ಬೆಳಗ್ಗೆ 10:30ಕ್ಕೆ ನಡೆಯಲಿದ್ದು, ಅದಕ್ಕಾಗಿ ಒಂದೇ ಅವಧಿ ನಿಗದಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಎಸ್ಸಿ ಅಧಿಕೃತ ವೆಬ್ಸೈಟ್ನಲ್ಲಿ(cbseresults.nic.in) ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ.
10ನೇ ತರಗತಿ ಪರೀಕ್ಷೆಗಳು ಏಪ್ರಿಲ್ 26ರಿಂದ ಮೇ 24ರವರೆಗೆ ಹಾಗೂ 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 26ರಿಂದ ಜೂನ್ 15ರವರೆಗೆ ನಡೆಯಲಿವೆ ಎಂದು ಬೋರ್ಡ್ ತಿಳಿಸಿದೆ. ಯಾವ ದಿನಾಂಕದಂದು ಯಾವ ಪರೀಕ್ಷೆ ನಡೆಯಲಿದೆ ಎಂಬುದರ ದಿನಾಂಕ ಕೂಡ ಪ್ರಕಟಿಸಿದೆ.
ಇದನ್ನೂ ಓದಿ:ಪಕ್ಷ ಗೆಲ್ಲಿಸಿ ಚುನಾವಣೆಯಲ್ಲಿ ಸೋತ ಸಿಎಂ ಧಾಮಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
ಸಿಬಿಎಸ್ಇ ಟರ್ಮ್-Iರ ಫಲಿತಾಂಶ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ಈ ಪ್ರಕಟಣೆ ಹೊರಡಿಸಿದೆ. CBSE 10ನೇ ತರಗತಿಯ ಟರ್ಮ್-I ಪರೀಕ್ಷೆ ನವೆಂಬರ್ 30 ರಿಂದ ಡಿಸೆಂಬರ್ 11ರವರೆಗೆ ದೇಶದಾದ್ಯಂತ ನಡೆದಿದ್ದವು. ಇದರ ಜೊತೆಗೆ 12ನೇ ತರಗತಿಯ ಟರ್ಮ್-I ಪರೀಕ್ಷೆಗಳು ಡಿಸೆಂಬರ್ 1 ರಿಂದ ಡಿಸೆಂಬರ್ 22ರವರೆಗೆ ನಡೆಸಲಾಗಿತ್ತು.