ಕರ್ನಾಟಕ

karnataka

ETV Bharat / bharat

CBSE 10,12ನೇ ತರಗತಿ ಪ್ರಥಮಾವಧಿ ಬೋರ್ಡ್​ ಪರೀಕ್ಷೆ ದಿನಾಂಕ ಪ್ರಕಟ - CBSE 10,12ನೇ ತರಗತಿ ಪ್ರಥಮಾವಧಿ ಬೋರ್ಡ್​ ಪರೀಕ್ಷೆ

ನವೆಂಬರ್​​-ಡಿಸೆಂಬರ್​ ತಿಂಗಳಲ್ಲಿ 10 ಹಾಗೂ 12ನೇ ತರಗತಿಗಳ ಸಿಬಿಎಸ್​ಇ ಪ್ರಥಮಾವಧಿಯ ಪರೀಕ್ಷೆ ನಡೆಯಲಿದ್ದು, ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಅಧಿಕೃತ ಮಾಹಿತಿ ಹೊರಡಿಸಿದೆ.

CBSE
CBSE

By

Published : Oct 18, 2021, 9:51 PM IST

ನವದೆಹಲಿ:ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್​​ಇ) 10 ಹಾಗೂ 12ನೇ ತರಗತಿಯ ಪ್ರಥಮಾವಧಿ ಬೋರ್ಡ್​ ಪರೀಕ್ಷೆ ದಿನಾಂಕ ಪ್ರಕಟಗೊಂಡಿದ್ದು, ನವೆಂಬರ್​ ಡಿಸೆಂಬರ್​ ತಿಂಗಳಲ್ಲಿ ಪರೀಕ್ಷೆ ನಡೆಯಲಿವೆ.

10ನೇ ತರಗತಿ ವಿದ್ಯಾರ್ಥಿಳಿಗೆ ನವೆಂಬರ್​ 30ರಿಂದ ಪರೀಕ್ಷೆ ಪ್ರಾರಂಭವಾಗಿ ಡಿಸೆಂಬರ್​ 11ಕ್ಕೆ ಮುಕ್ತಾಯಗೊಳ್ಳಲಿದ್ದು, 12ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್​​​​ 1ರಿಂದ ಪರೀಕ್ಷೆ ಪ್ರಾರಂಭವಾಗಿ ಡಿಸೆಂಬರ್​​ 22ಕ್ಕೆ ಮುಕ್ತಾಯಗೊಳ್ಳಲಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಬಿಎಸ್​ಇ ಪರೀಕ್ಷಾ ನಿಯಂತ್ರಕರಾದ ಸನ್ಯಂ ಭಾರದ್ವಾಜ್​, ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ. ಪ್ರಶ್ನೆ ಪತ್ರಿಕೆ ನೇರವಾಗಿ ಶಾಲೆಗಳಿಗೆ ಕಳುಹಿಸಿಕೊಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಪ್ರತಿ ಪತ್ರಿಕೆಯ ಅವಧಿ 90 ನಿಮಿಷಗಳು ಆಗಿರುತ್ತದೆ ಎಂದಿದ್ದಾರೆ.

ಸಿಬಿಎಸ್​ಇ 12ನೇ ತರಗತಿಯಲ್ಲಿ ಒಟ್ಟು 114 ವಿಷಯ ಹಾಗೂ 10ನೇ ತರಗತಿಯಲ್ಲಿ 75 ವಿಷಯಗಳಿದ್ದು, ಒಟ್ಟು 189 ವಿಷಯಗಳಿಗೆ ಪರೀಕ್ಷೆ ನಡೆಯಲಿವೆ ಎಂದು ಹೇಳಿದ್ದಾರೆ. ಎಲ್ಲ ಪರೀಕ್ಷೆಗಳು 40ರಿಂದ 45 ದಿನದೊಳಗೆ ಮುಕ್ತಾಯಗೊಳ್ಳಲಿವೆ ಎಂದಿದ್ದಾರೆ.

12ನೇ ತರಗತಿ ಪ್ರಮುಖ ಪರೀಕ್ಷೆಗಳ ದಿನಾಂಕ ಇಂತಿದೆ

ವಿಜ್ಞಾನ ವಿಭಾಗ

  • English Core: Dec 3
  • Hindi Core: Dec 16
  • Hindi Elective: Dec 16
  • Mathematics: Dec 6
  • Physics: Dec 10
  • Chemistry: Dec 14
  • Biology: Dec 18
  • Physical Education: Dec 7
  • Computer Science (New): Dec 21

ವಾಣಿಜ್ಯ ವಿಭಾಗ

  • English Core: Dec 3
  • Hindi Core: Dec 16
  • Hindi Elective: Dec 16
  • Mathematics: Dec 6
  • Accountancy: Dec 13
  • Business Studies: Dec 8
  • Economics: Dec 15
  • Informatics Practices (New): Dec 21
  • Physical Education: Dec 7

ಕಲಾ ವಿಭಾಗ

  • English Core: Dec 3
  • Hindi Core: Dec 16
  • Hindi Elective: Dec 16
  • History: Dec 20
  • Geography: Dec 9
  • Political Science: Dec 17
  • Economics: Dec 15
  • Informatics Practices (New): Dec 21
  • Physical Education: Dec 7
  • Psychology: Dec 11
  • Sociology: Dec 1
  • Home Science: Dec 22
    10ನೇ ತರಗತಿ ಪರೀಕ್ಷೆಗಳ ದಿನಾಂಕ
  • English Language and Literature: Dec 11
  • Hindi Course A: Dec 9
  • Hindi Course B: Dec 9
  • Mathematics Standard: Dec 4
  • Mathematics Basic: Dec 4
  • Science: Dec 2
  • Social Science: Nov 30
  • Computer Applications: Dec 8
  • Home Science: Dec 3

ABOUT THE AUTHOR

...view details