ಕರ್ನಾಟಕ

karnataka

ETV Bharat / bharat

10-12ನೇ ತರಗತಿ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್​​, ಅಗ್ರಿಗೇಟ್​, ಶೇಕಡಾವಾರು ಅಂಕ ತೆಗೆದು ಹಾಕಿದ ಸಿಬಿಎಸ್​ಇ: ಟಾಪರ್ಸ್​ ಘೋಷಣೆಗೆ ಬ್ರೇಕ್​ - ಸಿಬಿಎಸ್​ಸಿ ಅಂಕಪಟ್ಟಿ

ಸಿಬಿಎಸ್​ಇ ಫಲಿತಾಂಶ ಅಂಕಪಟ್ಟಿಯಲ್ಲಿ ಶೇಕಡಾವಾರು ಅಂಕ, ಶ್ರೇಣಿ ಅಥವಾ ಡಿಸ್ಟಿಂಕ್ಷನ್​ ಪ್ರಕಟ ಮಾಡಲ್ಲ ಎಂದು ಮಂಡಳಿ ತಿಳಿಸಿದೆ.

ಸಿಬಿಎಸ್​ಇ ಹೊಸ ನಿರ್ಧಾರ
ಸಿಬಿಎಸ್​ಇ ಹೊಸ ನಿರ್ಧಾರ

By PTI

Published : Dec 1, 2023, 9:13 PM IST

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮುಂಬರುವ 10 ಮತ್ತು 12ನೇ ತರಗತಿ ಪರೀಕ್ಷೆಗೆ ಮುನ್ನ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಫಲಿತಾಂಶಗಳಿಂದ ಡಿಸ್ಟಿಂಕ್ಷನ್​, ಅಗ್ರಿಗೆಟ್​ ಮತ್ತು ಶ್ರೇಣಿಗಳನ್ನು ತೆಗದು ಹಾಕಿರುವುದಾಗಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ CBSE ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್​, ಮಂಡಳಿಯು ಪ್ರತಿಯೊಂದು ವಿಷಯದಲ್ಲೂ ಅಂಕಗಳನ್ನು ನೀಡುವ ಹಳೆಯ ನಿಯಮವನ್ನೇ ಮುಂದುವರಿಸಲಿದೆ. ಆದರೆ ಒಟ್ಟಾರೆ ಅಂಕವನ್ನು ಪ್ರಕಟಿಸಲ್ಲ ಮತ್ತು ಘೋಷಣೆ ಮಾಡಲಾಗುವುದಿಲ್ಲ ಎಂದು ಹೇಳಿದರು.

ಒಂದು ವೇಳೆ, ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಅಥವಾ ಕಂಪನಿಯಲ್ಲಿ ಉದ್ಯೋಗ ಪಡೆಯಲು ಶೆಕಡವಾರು ಅಂಕಗಳ ಅಗತ್ಯವಿದ್ದರೆ ಆಯಾ ಸಂಸ್ಥೆಗಳು ವಿಷಯವಾರು ಅಂಕಗಳನ್ನು ಪರಿಗಣಿಸಬಹುದಾಗಿದೆ. ಆದರೇ ಸಿಬಿಎಸ್​ಸಿ ಬೋರ್ಡ್ ​​ಮಾತ್ರ ಅಂಕ ಪಟ್ಟಿಯಲ್ಲಿ ಯಾವುದೇ ಗ್ರೇಡ್​ ಆಗಲಿ ಅಂಕಗಳು ಅಥವಾ ಒಟ್ಟು ಮೊತ್ತವನ್ನು ನೀಡಲ್ಲ ಎಂದು CBSE ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್​​​ ಹೇಳಿದರು.

ಕಾಲೇಜಿನಲ್ಲಿ ಪ್ರವೇಶ ಅಥವಾ ಉದ್ಯೋಗ ಪಡೆಯುವುದು ಹೇಗೆ?:ಒಬ್ಬ ವಿದ್ಯಾರ್ಥಿಯು ಬೋರ್ಡ್ ಪರೀಕ್ಷೆಯಲ್ಲಿ ಐದಕ್ಕಿಂತ ಹೆಚ್ಚು ವಿಷಯಗಳನ್ನು ತೆಗೆದುಕೊಂಡಿದ್ದರೆ, ಒಟ್ಟಾರೆ ಅಂಕ ಅಗತ್ಯವಿದ್ದಲ್ಲಿ ಉತ್ತಮ 5 ವಿಷಯಗಳ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿಗೆ ಪ್ರವೇಶ ನೀಡುವ ಅಥವಾ ಉದ್ಯೋಗ ನೀಡುವ ನಿರ್ಧಾರವನ್ನು ಆಯಾ ಕಂಪನಿಗಳು ಅಥವಾ ಶಿಕ್ಷಣ ಸಂಸ್ಥೆಗಳು ತೆಗೆದುಕೊಳ್ಳುತ್ತವೆ. ಇದರಲ್ಲಿ ಸಿಬಿಎಸ್‌ಇ ಮಂಡಳಿಯ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ.

ಈ ಹಿಂದೆ, ವಿದ್ಯಾರ್ಥಿಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು CBSE ಮೆರಿಟ್ ಪಟ್ಟಿಗಳನ್ನು ನೀಡುವುದನ್ನು ಸಿಬಿಎಸ್​ ಬೋರ್ಡ್​ ತೆಗೆದುಹಾಕಿತ್ತು. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಅಧಾರದ ಮೇಲೆ ಮೆರಿಟ್​ ಪ್ರಕಟಿಸುವ ನಿರ್ಧಾರವನ್ನು ​ಬೋರ್ಡ್​ ಲಾಕ್‌ಡೌನ್ ಸಮಯದಲ್ಲಿ ಕೈಬಿಟ್ಟಿತ್ತು.

10 ಮತ್ತು 12ನೇ ತರಗತಿ ಪರೀಕ್ಷೆ ದಿನಾಂಕ ಪ್ರಕಟ:10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು 2024ರ ಫೆಬ್ರವರಿ 15 ರಿಂದ ಪ್ರಾರಂಭವಾಗಲಿದೆ ಎಂದು CBSE ಮೇ ತಿಂಗಳಲ್ಲಿ ಘೋಷಿಸಿತ್ತು. ಕಳೆದ ವರ್ಷ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ 21ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ 16 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ಇದನ್ನೂ ಓದಿ:ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ABOUT THE AUTHOR

...view details