ನವದೆಹಲಿ:ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ ಅಂಗಸಂಸ್ಥೆ ಶಾಲೆಗಳಿಂದ 2020ನೇ ಸಾಲಿನಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
' ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್'ವಿದ್ಯಾರ್ಥಿ ವೇತನಕ್ಕೆ ಸಿಬಿಎಸ್‌ಇ ಅರ್ಜಿ ಆಹ್ವಾನ - 2020 ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಅರ್ಜಿ
ಸಿಬಿಎಸ್‌ಇ ಅಂಗಸಂಸ್ಥೆ ಶಾಲೆಗಳಿಂದ 2020ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿನಿಯರು ಪಿಯುಸಿ ಅಧ್ಯಯನಕ್ಕಾಗಿ ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಸಲು ಸಿಬಿಎಸ್ಸಿ ಆಹ್ವಾನಿಸಿದೆ.
![' ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್'ವಿದ್ಯಾರ್ಥಿ ವೇತನಕ್ಕೆ ಸಿಬಿಎಸ್‌ಇ ಅರ್ಜಿ ಆಹ್ವಾನ CBSE invites application for single girl child scholarship scheme](https://etvbharatimages.akamaized.net/etvbharat/prod-images/768-512-9565109-1106-9565109-1605576253148.jpg)
ವಿದ್ಯಾರ್ಥಿ ವೇತನಕ್ಕೆ ಸಿಬಿಎಸ್‌ಇ ಅರ್ಜಿ ಆಹ್ವಾನ
ಒಬ್ಬ ಹೆಣ್ಣು ಮಗಳನ್ನು ಹೊಂದಿರುವ ಪೋಷಕರ ಮಕ್ಕಳಿಗೆ 12ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ ಸ್ಕಾಲರ್‌ಶಿಪ್ ಯೋಜನೆ ಜಾರಿಗೊಳಿಸಿದೆ. 2019 ಸಿಬಿಎಸ್‌ಇ ಮೆರಿಟ್ ಸ್ಕಾಲರ್‌ಶಿಪ್ ಸ್ಕೀಮ್' ಆನ್‌ಲೈನ್ ಅರ್ಜಿಗಳ ನವೀಕರಣದ ಕುರಿತು ಅಧಿಸೂಚನೆಯನ್ನು ಕಳುಹಿಸಿದೆ.
ಆನ್‌ಲೈನ್ ಅರ್ಜಿ ಸ್ವೀಕರಿಸಲು ಡಿಸೆಂಬರ್ 10 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ www.cbse.nic.in ಅನ್ನು ಪರಿಶೀಲಿಸಲು ಸಿಬಿಎಸ್ಸಿ ತಿಳಿಸಿದೆ.
TAGGED:
CBSE scholarship