ನವದೆಹಲಿ:2022ನೇ ಸಾಲಿನ ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆಗೋಸ್ಕರ ಮಹತ್ವದ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಎರಡು ಭಾಗಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ ಎಂದು ಕೇಂದ್ರಿಯ ಫ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ಹೇಳಿದೆ.
2021-22ನೇ ಸಾಲಿನ ಸಿಲೆಬಸ್ ಅನ್ನು ಎರಡು ವಿಭಾಗಗಳಾಗಿ ವಿಂಗಡನೆ ಮಾಡಿರುವ ಕೇಂದ್ರ ಸರ್ಕಾರ ಪ್ರತಿ ಸಿಲೆಬಸ್ನಲ್ಲಿ ಶೇ. 50ರಷ್ಟು ಪಾಠಗಳಿರಲಿವೆ. ಮೊದಲ ಭಾಗದ ಸಿಲೆಬಸ್ ಮುಕ್ತಾಯಗೊಳ್ತಿದ್ದಂತೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಕೊನೆಯ ಶೈಕ್ಷಣಿಕ ವರ್ಷದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಸಿಬಿಎಸ್ಇ ಮಂಡಳಿ ಹೇಳಿದೆ.