ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕ ಅನುಬ್ರತಾ ಮಂಡಲ್ ಅವರ ಪುತ್ರಿ ಸುಕನ್ಯಾ ಮಂಡಲ್ಗೂ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ ಸುಕನ್ಯಾ ಮಂಡಲ್ಗೆ ಸಮನ್ಸ್ ಕಳುಹಿಸಲಾಗಿದೆ. ಇದಕ್ಕೂ ಮುನ್ನ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನಿವಾಸದಲ್ಲೇ ಸುಕನ್ಯಾರನ್ನು ವಿಚಾರಣೆಗೂ ಒಳಪಡಿಸಿದ್ದರು.
ಸುಕನ್ಯಾ ಮಂಡಲ್ ಮತ್ತು ಆಕೆಯ ತಂದೆ ಅನುಬ್ರತಾ ಮಂಡಲ್ ಹೆಸರಿನಲ್ಲಿ ನಡೆಸುತ್ತಿರುವ ವ್ಯವಹಾರಗಳ ಕುರಿತು ಸಿಬಿಐ ಹಲವು ದಾಖಲೆಗಳನ್ನು ಕೇಳಿದೆ. ಈ ಹಿಂದೆ ಸುಕನ್ಯಾ ಅವರ ತಂದೆಯ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಈ ಪ್ರಶ್ನೆಗಳನ್ನು ತನ್ನ ತಂದೆಯ ವ್ಯವಹಾರದ ಖಾತೆಗಳನ್ನು ನೋಡಿಕೊಳ್ಳುವ ಮನೀಶ್ ಕೊಠಾರಿಗೆ ಕೇಳಬೇಕೆಂದು ಸುಕನ್ಯಾ ಹೇಳಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಇನ್ನು, ಟಿಎಂಸಿ ಪಕ್ಷದ ಪ್ರಭಾವಿ ನಾಯಕರಾದ ಅನುಬ್ರತಾ ಮಂಡಲ್ ಈಗಾಗಲೇ ಬಂಧನಕ್ಕೆ ಒಳಗಾಗಿದ್ದು, ಈ ಹಿಂದೆ ಆಪ್ತರಿಗೂ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಇದೀಗ ಪುತ್ರಿ ಸುಕನ್ಯಾ ಮಂಡಲ್ಗೂ ಸಮನ್ಸ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ:ಜಾನುವಾರು ಕಳ್ಳಸಾಗಣೆ ಕೇಸ್: ಪಶ್ಚಿಮಬಂಗಾಳದಲ್ಲಿ ಟಿಎಂಸಿ ನಾಯಕನ ಬಂಧಿಸಿದ ಸಿಬಿಐ