ಮುಂಬೈ(ಮಹಾರಾಷ್ಟ್ರ): ಸಿಬಿಐ ಮಹಾರಾಷ್ಟ್ರದ ಮಾಜಿ ಗೃಹಮಂತ್ರಿ ವಿರುದ್ಧ ಸಲ್ಲಿಸಿರುವ ಎಫ್ಐಆರ್ ಕುರಿತಂತೆ ತನ್ನ ತನಿಖೆಯನ್ನು ಇನ್ನಷ್ಟು ವಿಸ್ತಾರಗೊಳಿಸಬೇಕೆಂದು ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ.
ಎಸ್.ಎಸ್.ಶಿಂಧೆ ಮತ್ತು ಎನ್.ಜೆ. ಜಮಾದಾರ್ ಅವರಿದ್ದ ಪೀಠ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಅನಿಲ್ ದೇಶಮುಖ್ ಮಾತ್ರವಲ್ಲದೇ ಪ್ರತಿಯೊಬ್ಬರ ಪಾತ್ರವನ್ನೂ ಸಿಬಿಐ ಗಮನಿಸಬೇಕೆಂದು ಹೇಳಿದೆ.
ಭ್ರಷ್ಟಾಚಾರ ಮತ್ತು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಬಿಐ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಅನಿಲ್ ದೇಶಮುಖ್ ಹೈಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಏಪ್ರಿಲ್ 24ರಂದು ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಇದನ್ನೂ ಓದಿ:35ನೇ ವಯಸ್ಸಿಗೆ ಕೇಂದ್ರ ಸಚಿವ ಸ್ಥಾನ! ಶಾಲಾ ಶಿಕ್ಷಕನಾಗಿ ಸಂಸದನಾದ ಯುವಕನಿಗೆ ಮೋದಿ ಮಣೆ
ಅನಿಲ್ ದೇಶಮುಖ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸಿಬಿಐ ಆದಷ್ಟು ಬೇಗ ಅಪರಾಧಿಗಳನ್ನು ಕಂಡುಹಿಡಿಯುತ್ತದೆ ಹಾಗೂ ತನ್ನ ತನಿಖಾ ವಿಸ್ತರಿಸುತ್ತದೆ ಎಂಬ ಭರವಸೆಯಿದೆ. ಈ ವಿಚಾರದಲ್ಲಿ ತನಿಖಾಧಿಕಾರಿಗಳು ತಾವು ಮುಗ್ಧರು ಎಂದು ಹೇಳುವಂತಿಲ್ಲ ಎಂದಿದ್ದಾರೆ.