ಕರ್ನಾಟಕ

karnataka

ETV Bharat / bharat

ದೇಶ್ಯಾದ್ಯಂತ ಎನ್​ಐಎ ಬಳಿಕ ಸಿಬಿಐ ದಾಳಿ.. ಕೇಂದ್ರಾಡಳಿತ, 20 ರಾಜ್ಯಗಳು ಸೇರಿ 56 ಕಡೆಯಲ್ಲಿ ಶೋಧ - ಶಂಕಿತರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ ದಾಳಿ

ಕೇಂದ್ರೀಯ ತನಿಖಾ ದಳ (ಸಿಬಿಐ) ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಸ್ತುಗಳ ಪ್ರಸಾರದ ವಿರುದ್ಧದ ಅಭಿಯಾನಕ್ಕೆ ಸಂಬಂಧಿಸಿದಂತೆ ದೇಶದ ನಾನಾ ಕಡೆಯಲ್ಲಿ ದಾಳಿ ನಡೆಸಿದೆ.

CBI searches are underway at 56 locations  nline child sexual exploitation material case  CBI searches are underway  ಎನ್​ಐಎ ಬಳಿಕ ಸಿಬಿಐ ದಾಳಿ  ಕೇಂದ್ರೀಯ ತನಿಖಾ ದಳ  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಸ್ತುಗಳ ಪ್ರಸಾರ  ಆಪರೇಷನ್ ಮೇಘ ಚಕ್ರ  ಶಂಕಿತರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ ದಾಳಿ  ಕ್ಲೌಡ್ ಸ್ಟೋರೇಜ್ ಸೌಲಭ್ಯ
ದೇಶ್ಯಾದ್ಯಂತ ಎನ್​ಐಎ ಬಳಿಕ ಸಿಬಿಐ ದಾಳಿ

By

Published : Sep 24, 2022, 12:38 PM IST

ನವದೆಹಲಿ: ಆಪರೇಷನ್ 'ಮೇಘ ಚಕ್ರ'ದ ಭಾಗವಾಗಿ ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಸ್ತುಗಳ ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

ಇಂಟರ್‌ಪೋಲ್ ಸಿಂಗಪುರದ ಇನ್‌ಪುಟ್‌ಗಳು ಮತ್ತು ಕ್ಲೌಡ್ ಸ್ಟೋರೇಜ್ ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಸಿಎಸ್‌ಎಎಂನ ಪೆಡ್ಲರ್‌ಗಳ ವಿರುದ್ಧ ಕಳೆದ ವರ್ಷದ ಆಪರೇಷನ್ ಕಾರ್ಬನ್ ಸಮಯದಲ್ಲಿ ಪಡೆದ ಮಾಹಿತಿಯನ್ನು ಆಧರಿಸಿ ಈ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸಂಬಂಧಿತ ವಿಷಯಗಳನ್ನು ಅಂತರ್ಜಾಲ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಶಂಕಿತರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಬಿಐ ಶನಿವಾರ 20 ರಾಜ್ಯಗಳಲ್ಲಿ ದಾಳಿ ನಡೆಸಿದೆ. ಸಿಬಿಐ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಕೇಂದ್ರಾಡಳಿತ ಪ್ರದೇಶಗಳು ಮತ್ತು 20 ರಾಜ್ಯಗಳು ಸೇರಿದಂತೆ 56 ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸುತ್ತಿದೆ.

ಈ ಕಾರ್ಯಾಚರಣೆಯು ಅಪ್ರಾಪ್ತ ವಯಸ್ಕರೊಂದಿಗೆ ಅಕ್ರಮ ಲೈಂಗಿಕ ಚಟುವಟಿಕೆಗಳ ಆಡಿಯೋ-ದೃಶ್ಯಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಬಳಸುವ ಕ್ಲೌಡ್ ಸ್ಟೋರೇಜ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಳಿ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ:ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಪುತ್ರಿ ಸುಕನ್ಯಾ​ಗೂ ಸಿಬಿಐ ಸಮನ್ಸ್

ABOUT THE AUTHOR

...view details