ನವದೆಹಲಿ: ಬ್ಯಾಂಕ್ವೊಂದಕ್ಕೆ ಸುಮಾರು 40 ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ನ ಎಎಪಿ ಎಂಎಲ್ಎ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ವಿರುದ್ಧ ಸಿಬಿಐ ದಾಳಿ ನಡೆಸಿದೆ. ಸಂಗ್ರೂರ್ನಲ್ಲಿರುವ ಮೂರು ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಸಂಗ್ರೂರ್ ಜಿಲ್ಲೆಯ ಮಲೇರ್ ಕೋಟ್ಲಾ ಏರಿಯಾದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ಎ ಜಸ್ವಂತ್ ಸಿಂಗ್ ಗಜ್ಜನ್ ಮಾಜ್ರಾ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅಮರ್ಗಢ ಎಂಎಲ್ಎ ಆಗಿರುವ ಜಸ್ವಂತ್ ಸಿಂಗ್ ಬ್ಯಾಂಕ್ಗೆ ವಂಚಿಸಿರುವ ಆರೋಪ ಹೊತ್ತಿದ್ದಾರೆ.