ಕರ್ನಾಟಕ

karnataka

By

Published : May 5, 2022, 5:20 PM IST

ETV Bharat / bharat

ಸುನ್ನತಿ ಮಾಡಿಸಿಕೋ ಎಂಬ ಒತ್ತಾಯದ ಆರೋಪ: ಕುವೈತ್​ ದಂಪತಿ ಹತ್ಯೆ ಮಾಡಿದ ಭಾರತೀಯನ ವಿರುದ್ಧ ಎಫ್​ಐಆರ್​

ತನ್ನ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ತನ್ನ ಪಾಸ್‌ಪೋರ್ಟ್ ತಡೆಹಿಡಿದು ಸುನ್ನತಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಒತ್ತಾಯ ಮಾಡಿದ ಆರೋಪದ ಮೇಲೆ ಕುವೈತ್‌ನಲ್ಲಿ ತನ್ನ ಉದ್ಯೋಗದಾತ ಮತ್ತು ಅವನ ಹೆಂಡತಿಯನ್ನು ಕೊಂದ ಆರೋಪದ ಮೇಲೆ ಭಾರತೀಯ ಪ್ರಜೆ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲು ಮಾಡಿಕೊಂಡಿದೆ.

ಕುವೈತ್ ಉದ್ಯೋಗದಾತ ದಂಪತಿಯನ್ನು ಕೊಂದ ಭಾರತೀಯನ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ
ಕುವೈತ್ ಉದ್ಯೋಗದಾತ ದಂಪತಿಯನ್ನು ಕೊಂದ ಭಾರತೀಯನ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ

ನವದೆಹಲಿ: ತನ್ನ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಪಾಸ್‌ಪೋರ್ಟ್ ತಡೆಹಿಡಿದು ಸುನ್ನತಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಒತ್ತಾಯ ಮಾಡಿದ ಆರೋಪದ ಮೇಲೆ ಕುವೈತ್‌ನಲ್ಲಿ ತನ್ನ ಉದ್ಯೋಗದಾತ ಮತ್ತು ಆತನ ಪತ್ನಿಯನ್ನೇ ಕೊಂದ ಆರೋಪದ ಮೇಲೆ ಭಾರತೀಯ ಪ್ರಜೆ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ದೂರು ದಾಖಲು ಮಾಡಿದೆ.

ಎಫ್‌ಐಆರ್ ಪ್ರಕಾರ 2012 ರಲ್ಲಿ ಸಂತೋಷ್ ಕುಮಾರ್ ರಾಮ ಎಂಬುವವ ಕುವೈತ್ ಪ್ರಜೆಗಳಾದ ಫಹಾದ್ ಬೆನ್ ನಾಸರ್ ಇಬ್ರಾಹಿಂ ಮತ್ತು ಅವರ ಪತ್ನಿ ಸಲಾಮಾ ಫರಾಜ್ ಸೇಲಂ ಅವರನ್ನು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ದಂಪತಿ ಆರೋಪಿಯ ಪಾಸ್‌ಪೋರ್ಟ್ ಅನ್ನು ತಮ್ಮಲ್ಲೇ ಇರಿಸಿಕೊಂಡಿದ್ದರಂತೆ ಹಾಗೆ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಸುನ್ನತಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಒತ್ತಾಯಿಸಿದ್ದರಂತೆ. ಇದರಿಂದ ರೊಚ್ಚಿಗೆದ್ದ ಆತ ಇಬ್ಬರನ್ನೂ ಕೊಂದು ತನ್ನ ಪಾಸ್​ಪೋರ್ಟ್​​ನ್ನು ತೆಗೆದುಕೊಂಡಿದ್ದ ಎಂದು ಎಫ್​ಐಆರ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ಆರೋಪಿ ಸಂತೋಷ್ ಕುಮಾರ್​ನನ್ನು ಹಸ್ತಾಂತರಿಸುವಂತೆ ಕುವೈತ್‌ನಲ್ಲಿ ಅಧಿಕಾರಿಗಳು 2016 ರ ಡಿಸೆಂಬರ್‌ನಲ್ಲಿ ಮನವಿ ಮಾಡಿದ್ದರು. ಇನ್ನು ಸಂತೋಷ್ ಕುಮಾರ್​​ ಕೃತ್ಯಕ್ಕೆ ಕುವೈತ್ ಪ್ರಥಮ ನ್ಯಾಯಾಲಯವು ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: ಬೆಚ್ಚಿ ಬೀಳಿಸುವ ವಿಡಿಯೋ.. ರಸ್ತೆ ಮಧ್ಯೆಯೇ ಎಳೆದಾಡಿ ಚಿರತೆ ತಿಂದ ಕಾಡು ಹಂದಿಗಳು!

ABOUT THE AUTHOR

...view details