ಕರ್ನಾಟಕ

karnataka

ETV Bharat / bharat

ದೆಹಲಿ ಲಿಕ್ಕರ್​ ಕೇಸ್​.. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಪುತ್ರಿಗೆ ಸಿಬಿಐ ನೋಟಿಸ್​ - ದೆಹಲಿ ಲಿಕ್ಕರ್​ ಕೇಸ್

ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್​ಸಿ ಕವಿತಾ ಅವರಿಗೆ ಸಿಬಿಐ ನೋಟಿಸ್ ನೀಡಿದೆ.

Delhi liquor scam  CBI notices to MLC Kavitha  CBI notices to MLC Kavitha in Delhi liquor scam  MLC Kavitha news  ದೆಹಲಿ ಮದ್ಯ ಹಗರಣ  ತೆರಸಾ ಎಂಎಲ್​ಸಿಗೆ ಸಿಬಿಐ ನೋಟಿಸ್​ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು  ತೆರಸಾ ಎಂಎಲ್ಸಿ ಕವಿತಾಗೆ ಸಿಬಿಐ ನೋಟಿಸ್
ತೆರಸಾ ಎಂಎಲ್​ಸಿಗೆ ಸಿಬಿಐ ನೋಟಿಸ್​

By

Published : Dec 3, 2022, 7:45 AM IST

ನವದೆಹಲಿ:ದೆಹಲಿ ಮದ್ಯ ಹಗರಣ ಪ್ರಕರಣದ ತನಿಖೆ ತೀವ್ರಗತಿಯಿಂದ ಸಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದ್ದು, ಈಗ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಅವರ ಪುತ್ರಿಯೂ ಆಗಿರುವ ಎಂಎಲ್ಸಿ ಕವಿತಾ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಸಿಬಿಐ ಸೆಕ್ಷನ್ 160 CrPC ಅಡಿಯಲ್ಲಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.

ಇದೇ ತಿಂಗಳ 6ರಂದು ಬೆಳಗ್ಗೆ 11 ಗಂಟೆಗೆ ಹೈದರಾಬಾದ್​ನಲ್ಲಿ ವಿಚಾರಣೆ ನಡೆಯಲಿದೆ. ಸಿಬಿಐನಿಂದ ನೋಟಿಸ್ ಬಂದಿರುವುದನ್ನು ಎಂಎಲ್​ಸಿ ಕವಿತಾ ಖಚಿತಪಡಿಸಿದ್ದಾರೆ. ದೆಹಲಿ ಮದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ 36 ಜನರನ್ನು ಆರೋಪಿ ಅಮಿತ್ ಅರೋಡಾ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ಪ್ರಕರಣ ಸಂಬಂಧ ಶಂಕೆ ವ್ಯಕ್ತಪಡಿಸಿ ಇಡಿ ಅವರನ್ನು ಬಂಧಿಸಿತ್ತು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ರಿಮಾಂಡ್ ವರದಿಯಲ್ಲಿ ತೆಲುಗು ರಾಜ್ಯಗಳ ಕಲ್ವಕುಂಟ್ಲ ಕವಿತಾ, ಶರತ್ ರೆಡ್ಡಿ, ಗೋರಂಟ್ಲ ಬುಚ್ಚಿಬಾಬು, ಬೋಯಿನಪಲ್ಲಿ ಅಭಿಷೇಕ್, ಸೃಜನ್ ರೆಡ್ಡಿ ಹೆಸರು ಉಲ್ಲೇಖವಾಗಿದ್ದು, ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್​ ನೀಡುತ್ತಿದೆ.

ಓದಿ:ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ

ABOUT THE AUTHOR

...view details