ಮುಂಬೈ (ಮಹಾರಾಷ್ಟ್ರ) :ಪೊಲೀಸ್ ವರ್ಗಾವಣೆ, ಪೋಸ್ಟಿಂಗ್ ಕುರಿತಂತೆ ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ ಸೋರಿಕೆಯಾದ ಹಿನ್ನೆಲೆ ಸಿಬಿಐ ನಿರ್ದೇಶಕರಿಗೆ ಮುಂಬೈ ಪೊಲೀಸ್ನ ಸೈಬರ್ ಸೆಲ್ ಸಮನ್ಸ್ ನೀಡಿದೆ.
ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ಗೆ ಮುಂಬೈ ಪೊಲೀಸ್ನ ಸೈಬರ್ ಸೆಲ್ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.