ಕರ್ನಾಟಕ

karnataka

ETV Bharat / bharat

ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಬಂಧನ ವಿಳಂಬ ? - etv bharat kannada

ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಬಂಧನಕ್ಕೆ ಕಾನೂನು ತೊಡಕುಗಳೆಲ್ಲ ನಿವಾರಣೆಯಾಗಿದ್ದರೂ ಅವರನ್ನು ಬಂಧಿಸಲು ಸಿಬಿಐ ತಡವಾಗುತ್ತಿರುವುದು ಈಗ ಚರ್ಚೆಗೆ ಕಾರಣವಾಗಿದೆ.

cbi-delaying-arrest-of-mp-ys-avinash-reddy-for-vivekananda-reddy-murder-case
ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಬಂಧನಕ್ಕೆ ಸಿಬಿಐ ಮೀನಮೇಷ

By

Published : May 24, 2023, 7:30 PM IST

ಅಮರಾವತಿ(ಆಂಧ್ರಪ್ರದೇಶ): ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ಕಡಪ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಬಂಧನಕ್ಕೆ ಸಂಬಂಧಿಸಿದಂತೆ ಸಿಬಿಐ ಧೋರಣೆ ಅಸ್ಪಷ್ಟವಾಗಿದೆ ಎಂದು ಆಂಧ್ರಪ್ರದೇಶದಲ್ಲಿ ಚರ್ಚೆ ಆಗುತ್ತಿದೆ. ಫೆಬ್ರವರಿಯಲ್ಲಿ ಅವಿನಾಶ್​ ಅವರನ್ನು ಬಂಧಿಸಲು ಸ್ವತಃ ಸಿಬಿಐ ನಿರ್ಧರಿಸಿತ್ತು. ಕೋರ್ಟ್‌ಗೆ ವರದಿ ಸಲ್ಲಿಸಿ ತಿಂಗಳು ಕಳೆದರೂ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ನಿರೀಕ್ಷಣಾ ಜಾಮೀನಿಗೆ ಅವಿನಾಶ್ ರೆಡ್ಡಿ ಪದೇ ಪದೆ ನಡೆಸಿದ ಪ್ರಯತ್ನವೂ ವಿಫಲವಾಗಿದೆ. ಅವರನ್ನು ಬಂಧಿಸದಂತೆ ಸಿಬಿಐಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ತೆಲಂಗಾಣ ಹೈಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿವೆ. ಕಾನೂನು ತೊಡಕುಗಳೆಲ್ಲ ನಿವಾರಣೆಯಾಗಿ ಸುಮಾರು ಒಂದು ತಿಂಗಳು ಕಳೆದರೂ ಕೇಂದ್ರೀಯ ತನಿಖಾ ದಳ (ಸಿಬಿಐ) ಅವಿನಾಶ್ ರೆಡ್ಡಿ ಬಂಧನಕ್ಕೆ ಮೀನಮೇಷ ಎಣಿಸುತ್ತಿದೆ ಎಂಬ ವಿಚಾರ ಈಗ ಸದ್ದು ಮಾಡುತ್ತಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ.

ತನಿಖಾ ಸಂಸ್ಥೆಯಿಂದ ತನಿಖೆಗೆ ಕರೆದಾಗ ಆರೋಪಿಯು ಸತತವಾಗಿ ಎರಡು ಅಥವಾ ಮೂರು ಬಾರಿ ಹಾಜರಾಗಲು ವಿಫಲವಾದರೆ, ಆತನನ್ನು ತಕ್ಷಣವೇ ಬಂಧಿಸಲಾಗುತ್ತದೆ. ಅವಿನಾಶ್ ರೆಡ್ಡಿ ಮೊದಲಿನಿಂದಲೂ ಸಿಬಿಐಗೆ ಸಹಕರಿಸಲು ನಿರಾಕರಿಸುತ್ತಲೇ ಬಂದಿದ್ದಾರೆ. ಅವರು ಬಯಸಿದಾಗ ಅವರು ವಿಚಾರಣೆಗೆ ಹೋಗುತ್ತಾರೆ. ವಿಚಾರಣೆ ಮುಗಿಸಿಕೊಂಡು ಹೊರಬಂದು ಅವರು ಸಿಬಿಐ ತನಿಖೆಯ ವಿರುದ್ಧವೇ ಹಲವು ಟೀಕೆ, ಆರೋಪಗಳನ್ನು ಮಾಡಿದ್ದರು.

ಆದರೆ, ಸಂಸದ ಅವಿನಾಶ್‌ಗೆ ಯಾರಿಗೂ ಸಿಗದ ವಿನಾಯಿತಿಗಳನ್ನು ಸಿಬಿಐ ಏಕೆ ನೀಡುತ್ತಿದೆ ಎಂಬ ಪ್ರಶ್ನೆ ಎದ್ದಿದೆ ಎಂದು ಆಂಧ್ರಪ್ರದೇಶದಲ್ಲಿ ಪ್ರತಿಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಅವರಿಗೆ ಅಧಿಕಾರ ಮತ್ತು ರಾಜಕೀಯ ಪ್ರಭಾವವಿಲ್ಲದಿದ್ದರೆ ಸಿಬಿಐ ಈ ರೀತಿ ವರ್ತಿಸುತ್ತದೆಯೇ? ಎಂದು ಅನೇಕ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂಬ ವರದಿಗಳು ಆಗುತ್ತಿವೆ. ಬಂಧನವನ್ನು ತಪ್ಪಿಸಲು ಅವಿನಾಶ್ ತನ್ನ ಎಲ್ಲಾ ಕಾನೂನು ಹಕ್ಕುಗಳನ್ನು ಬಳಸಿದರೂ, ಅವರಿಗೆ ನ್ಯಾಯಾಲಯಗಳಿಂದ ಪರಿಹಾರ ಸಿಗಲಿಲ್ಲ. ಆದಾಗ್ಯೂ, ಅವರನ್ನು ಬಂಧಿಸದೇ ಮತ್ತು ಅವರಿಗೆ ಸಾಕಷ್ಟು ಸಮಯವನ್ನು ಸಿಬಿಐ ನೀಡದೆ ಎಂದು ಇನ್ನೂ ಹಲವರು ಪ್ರಶ್ನಿಸುತ್ತಿದ್ದಾರೆ.

ಏಪ್ರಿಲ್ 25 ರವರೆಗೆ ಸಂಸದ ಅವಿನಾಶ್ ಅವರನ್ನು ಬಂಧಿಸದಂತೆ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶಗಳು ಸ್ವೀಕಾರಾರ್ಹವಲ್ಲ ಮತ್ತು ಆ ಆದೇಶಗಳು ಜಾರಿಯಲ್ಲಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಏಪ್ರಿಲ್ 21 ರಂದು ತೀರ್ಪು ನೀಡಿತ್ತು. ಅವಿನಾಶ್ ಅವರನ್ನು ಬಂಧಿಸದಂತೆ ಸಿಬಿಐಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ಏಪ್ರಿಲ್ 29 ರಂದು ಸ್ಪಷ್ಟಪಡಿಸಿತ್ತು.

ಸಂಸದ ಅವಿನಾಶ್‌ ರೆಡ್ಡಿಗೆ ಸಿಬಿಐ ಮೇ.15 ರಂದು ನೋಟಿಸ್ ನೀಡಿತ್ತು, 16 ರಂದು ವಿಚಾರಣೆಗೆ ಬರಲು ಆದೇಶಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ವಿಚಾರಣೆಗೆ ಗೈರುಹಾಜರಾಗಿದ್ದರು. ಮೇ 19 ಮತ್ತು 22 ರಂದು ಕೂಡ ವಿಚಾರಣೆಗೆ ಹೋಗಲಿಲ್ಲ. 22ರಂದು ಸಿಬಿಐ ಅವರ ಬಂಧನಕ್ಕೆ ಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಅವಿನಾಶ್ ಮಂಗಳವಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದರು. ಅಲ್ಲಿ ಅವರಿಗೆ ಮತ್ತೆ ಹಿನ್ನಡೆಯಾಗಿತ್ತು.

ಇದನ್ನೂ ಓದಿ:ದ್ವೇಷ ಭಾಷಣ.. ಶಾಸಕ ಸ್ಥಾನ ಕಳೆದುಕೊಂಡಿದ್ದ ಪ್ರಕರಣದಲ್ಲಿ ಅಜಂ ಖಾನ್ ಖುಲಾಸೆ

ABOUT THE AUTHOR

...view details