ನವದೆಹಲಿ: ಅಪರೂಪದ ಮತ್ತು ಕಠಿಣ ಶಿಕ್ಷೆಯಲ್ಲಿ, ತಮಿಳುನಾಡಿನ ಕೊಯಮತ್ತೂರಿನ ವಿಶೇಷ ಸಿಬಿಐ ನ್ಯಾಯಾಲಯ ಕೆ.ಮೋಹನರಾಜ್ ಮತ್ತು ಕಮಲವಲ್ಲಿ ಎಂಬುವವರಿಗೆ 27 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 42.76 ಕೋಟಿ ರೂ.ದಂಡವನ್ನು ವಿಧಿಸಿದೆ. ಪೊಂಜಿ ಯೋಜನೆಗಳ ಮೂಲಕ ಸಾರ್ವಜನಿಕ ಠೇವಣಿದಾರರಿಗೆ 870.10 ಕೋಟಿ ರೂ.ಗೆ ವಂಚಿಸಿದ್ದಾರೆ ಎನ್ನಲಾಗಿದೆ.
ಮೂರು ಖಾಸಗಿ ಸಂಸ್ಥೆಗಳಾದ Paazee Forex Trading India Pvt Ltd, Paazee Trading Inc ಮತ್ತು Paazee Marketing Co ಮೇಲೆ ತಲಾ 28.74 ಕೋಟಿ ದಂಡವನ್ನು ನ್ಯಾಯಾಲಯ ವಿಧಿಸಿದೆ. ಒಟ್ಟು ದಂಡದ ಮೊತ್ತ 171.74 ಕೋಟಿ ರೂ.
ಆರೋಪಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಜೂ.15 ರಂದು ಪ್ರಕರಣ ದಾಖಲಿಸಿತ್ತು. ತಿರುಪ್ಪೂರ್‌ನ ಪಾಝೀ ಮಾರ್ಕೆಟಿಂಗ್ ಕಂ, ಮೋಹನ್‌ರಾಜ್, ನಿರ್ದೇಶಕರು ಮತ್ತು ಇತರ ಖಾಸಗಿ ಕಂಪನಿಗಳು ಸೇರಿದಂತೆ ಇತರರು ಜುಲೈ 2008 ರಿಂದ ಸೆಪ್ಟೆಂಬರ್ 2009 ರ ನಡುವೆ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ ಮತ್ತು ವಿವಿಧ ಠೇವಣಿದಾರರಿಂದ ಠೇವಣಿ ಸಂಗ್ರಹಿಸುವ ಮೂಲಕ 870.10 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.