ಮುಂಬೈ/ಚೆನ್ನೈ: ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಹಾಗು ಕಚೇರಿಗಳಿಗೆ ಇಂದು ಬೆಳಗ್ಗಿನಿಂದಲೇ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ದಾಖಲಾಗಿರುವ ಪ್ರಕರಣವೊಂದರ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Aircel-Maxis case : ಮಾಜಿ ಸಚಿವ ಚಿದಂಬರಂ ಹಾಗೂ ಮಗ ಕಾರ್ತಿಗೆ ಸಮನ್ಸ್
ಮೂಲಗಳ ಪ್ರಕಾರ, ಕಾರ್ತಿ ಚಿದಂಬರಂಗೆ ಸೇರಿದ ಒಟ್ಟು 7 ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ತಿ ಚಿದಂಬರಂ ಮಾಜಿ ಕೇಂದ್ರ ಸಚಿವ ಹಾಗು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರ ಪುತ್ರ. ದಾಳಿಯ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಅವರ ನಿವಾಸದೆದುರು ಪೊಲೀಸ್ ಭದ್ರತೆ ಕಂಡುಬಂತು.
ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ನನ್ನ ಮೇಲೆ ಅದೆಷ್ಟು ಬಾರಿ ದಾಳಿ?, ನಾನು ಸಂಖ್ಯೆಯನ್ನೇ ಮರೆತುಬಿಟ್ಟಿದ್ದೇನೆ. ಬಹುಶ: ಇದೊಂದು ದಾಖಲೆ ಎಂದು ಬರೆದುಕೊಂಡಿದ್ದಾರೆ.