ಕರ್ನಾಟಕ

karnataka

ETV Bharat / bharat

ಹತ್ರಾಸ್‌ ಅತ್ಯಾಚಾರ ಸೇರಿ 2020ರಲ್ಲಿ 800 ಪ್ರಕರಣಗಳ ತನಿಖೆ ಮುಗಿಸಿದ ಸಿಬಿಐ - CBI chief Director RK Shukla

ಸಾಂಕ್ರಾಮಿಕ ರೋಗದ ಭಾರಿ ಸವಾಲುಗಳ ನಡುವೆಯೂ ಕಳೆದ ವರ್ಷದಲ್ಲಿ ಸುಮಾರು 800 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲಾಗಿದೆ. ಕೊರೊನಾವಧಿ ವಿವಿಧ ಹಂತಗಳ ಕಾರ್ಯಾಚರಣೆಗೆ ಅಡೆತಡೆ ಉಂಟುಮಾಡಿತು ಎಂದು ಸಿಬಿಐ ನಿರ್ದೇಶಕ ಆರ್​​.ಕೆ.ಶುಕ್ಲಾ ಹೇಳಿದರು.

CBI concluded investigation in around 800 cases in 2020
ಸಿಬಿಐ

By

Published : Jan 1, 2021, 9:50 PM IST

ನವದೆಹಲಿ:ಕೊರೊನಾ ಲಾಕ್​​ಡೌನ್​​ ನಡುವೆಯೂ 2020ರ ವರ್ಷದಲ್ಲಿ ತನಿಖೆ ನಡೆಸಿದ ಹತ್ರಾಸ್ ಅತ್ಯಾಚಾರ ಪ್ರಕರಣ ಸೇರಿದಂತೆ ಸುಮಾರು 800 ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಲೇವಾರಿ ಮಾಡಿದೆ.

ಫೆಬ್ರವರಿಯಲ್ಲಿ ನಿವೃತ್ತಗೊಳ್ಳಲಿರುವ ಸಿಬಿಐ ನಿರ್ದೇಶಕ ಆರ್​​.ಕೆ.ಶುಕ್ಲಾ ಅವರು ತನಿಖಾ ದಳದ ಅಧಿಕಾರಿಗಳಿಗೆ ನೀಡಿದ ಭಾಷಣದಲ್ಲಿ ಈ ಮಾಹಿತಿ ನೀಡಿದರು. ಹಾಗೆಯೇ ಹೊಸ ವರ್ಷಕ್ಕೆ ಶುಭಾಶಯ ಕೋರಿದ ಅವರು, ಕೊರೊನಾಗೆ ಸಂಬಂಧಿಸಿದ ಲಾಕ್‌ಡೌನ್ ನಮಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತು. ವಿವಿಧ ಹಂತಗಳ ಕಾರ್ಯಾಚರಣೆಯಲ್ಲಿ ಭಾರಿ ಅಡೆತಡೆ ಉಂಟುಮಾಡಿತು ಎಂದು ಒತ್ತಿ ಹೇಳಿದರು.

ಓದಿ:ದೇಶದಲ್ಲಿ 'ಕೋವಿಶೀಲ್ಡ್​' ಲಸಿಕೆಯ ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ

ಕೋವಿಡ್​-19ನಿಂದ ಅಪಾರ ಪ್ರಾಣಹಾನಿ ಸಂಭವಿಸುತ್ತಿದ್ದ ಸಂದರ್ಭದಲ್ಲೇ ಸಾಥನ್‌ಕುಲಂ ಲಾಕಪ್ ಡೆತ್ ಪ್ರಕರಣ, ಹತ್ರಾಸ್​, ಬ್ಯಾಂಕ್ ವಂಚನೆ ಸೇರಿದಂತೆ ಹಲವು ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಯಿತು. ದೇಶ ಬಿಟ್ಟು ಪಲಾಯನ ಮಾಡಿರುವ ಉದ್ಯಮಿ ವಿಜಯ್​ ಮಲ್ಯ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ಹೋರಾಟದಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ವರ್ಚುವಲ್​​ ಸಭೆಯಲ್ಲಿ ಮಾಹಿತಿ ನೀಡಿದರು.

ಮಾತು ಮುಂದುವರೆಸಿದ ಶುಕ್ಲಾ, ಹೆಚ್ಚು ಹೆಚ್ಚು ತನಿಖೆಗಳಲ್ಲಿ ತೊಡಗಿಸಿಕೊಂಡು ವಾಸ್ತವತೆ ಮತ್ತು ಪ್ರಾಮಾಣಿಕತೆಯಿಂದ ಮಾಹಿತಿ ಕಲೆ ಹಾಕಬೇಕು. ಇದು ತನಿಖಾ ವಿಧಾನಗಳ ಅನುಭವ ಹೊಂದಲು ಸಹಾಯ ಮಾಡುತ್ತದೆ. ತನಿಖಾ ಪ್ರಕ್ರಿಯೆಯನ್ನು ವೇಗಗೊಳಿಸುವ ಮತ್ತು ಬಲಪಡಿಸಲು ಅಥವಾ ಮತ್ತಷ್ಟು ಸುಧಾರಿಸಲು ತಮ್ಮ ತಂಡಗಳಿಗೆ ಮಾರ್ಗದರ್ಶನ ನೀಡಲು ಅನುಕೂಲವಾಗುತ್ತದೆ ಎಂದು ಏಜೆನ್ಸಿಯ ಮೇಲ್ವಿಚಾರಣಾ ಅಧಿಕಾರಿಗಳಿಗೆ ಸಲಹೆ ನೀಡಿದರು.

ABOUT THE AUTHOR

...view details