ಕರ್ನಾಟಕ

karnataka

ETV Bharat / bharat

ಯೆಸ್​ ಬ್ಯಾಂಕ್ ಮಾಜಿ ನಿರ್ದೇಶಕ ರಾಣಾ, ಪತ್ನಿ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಸಿದ ಸಿಬಿಐ - ಯೆಸ್​ ಬ್ಯಾಂಕ್ ಮಾಜಿ ನಿರ್ದೇಶಕ ರಾಣಾ ಕಪೂರ್ ವಿರುದ್ಧ ಚಾರ್ಜ್​ ಶೀಟ್

ಮುಂಬೈನ ವಿಶೇಷ ಸಿಬಿಐ ಕೋರ್ಟ್​ ಮುಂದೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ತಮ್ಮ ಅಧಿಕಾರವನ್ನು ಕಪೂರ್ ದುರುಪಯೋಗ ಬಳಸಿಕೊಂಡು ಕಡಿಮೆ ಬೆಲೆಗೆ ಅಮೃತಾ ಶೆರ್​ಗಿಲ್ ಮಾರ್ಗದ 1.2 ಎಕರೆ ಬಂಗ್ಲೆ ಖರೀದಿಸಿದ್ದಾರೆ ಎಂದು ಸಿಬಿಐ ದೂರಿದೆ.

Rana Kapoor
Rana Kapoor

By

Published : Oct 9, 2021, 5:21 AM IST

Updated : Oct 9, 2021, 7:29 AM IST

ಮುಂಬೈ: 1700 ಕೋಟಿ ರೂ. ಲೋನ್ ಹಗರಣ ಆರೋಪ ಸಂಬಂಧ ಯೆಸ್ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಓ ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು ಹಾಗೂ ಅವಂತಾ ಗ್ರೂಪ್ ಕಂಪನಿ ಪ್ರಮೋಟರ್ ಗೌತಮ್ ಥಾಪರ್ ವಿರುದ್ಧ ಸಿಬಿಐ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ.

ಮುಂಬೈನ ವಿಶೇಷ ಸಿಬಿಐ ಕೋರ್ಟ್​ ಮುಂದೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ತಮ್ಮ ಅಧಿಕಾರವನ್ನು ಕಪೂರ್ ದುರುಪಯೋಗ ಬಳಸಿಕೊಂಡು ಕಡಿಮೆ ಬೆಲೆಗೆ ಅಮೃತಾ ಶೆರ್​ಗಿಲ್ ಮಾರ್ಗದ 1.2 ಎಕರೆ ಬಂಗ್ಲೆ ಖರೀದಿಸಿದ್ದಾರೆ ಎಂದು ಸಿಬಿಐ ದೂರಿದೆ.

ಅವಂತಾ ಗ್ರೂಪ್ ಸಂಸ್ಥೆ 400 ಕೋಟಿ ಸಾಲಕ್ಕೆ ಈ ಬಂಗ್ಲೆಯನ್ನು ಯೆಸ್​ ಬ್ಯಾಂಕ್​ಗೆ ಅಡಮಾನ ಮಾಡಿತ್ತು. ಈ ಬಂಗ್ಲೆಯ ಮಾರುಕಟ್ಟೆ ದರ 550 ಕೋಟಿ ರೂ. ಆದ್ರೆ ಕಪೂರ್ ಅವರು ಇದನ್ನು 378 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ಎಫ್​ಐಆರ್​ನಲ್ಲಿ ಸಿಬಿಐ ತಿಳಿಸಿದೆ.

ಜೊತೆಗೆ ಕಪೂರ್ ಪತ್ನಿ ನಿರ್ದೇಶಕರಾಗಿರುವ ಬ್ಲಿಸ್ ಅಡೋಬ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಹೆಸರಲ್ಲಿ ಅಕ್ರಮವಾಗಿ ಈ ಬಂಗ್ಲೆಯನ್ನು ಖರೀದಿಸಿದ್ದಾರೆ. ಆ ಬಳಿಕ 1360 ಕೋಟಿ ಹೆಚ್ಚುವರಿ ಸಾಲವನ್ನು ಅವಂತಾ ಗ್ರೂಪ್​​ನ ಇತರೆ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ನೀಡಿದೆ ಎಂದು ಸಿಬಿಐ ಆರೋಪಿಸಿದೆ.

Last Updated : Oct 9, 2021, 7:29 AM IST

ABOUT THE AUTHOR

...view details