ನವದೆಹಲಿ:ಭಾರತದ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಮತ್ತೊಂದು ವಂಚನೆ ಕೇಸ್ ಸೇರ್ಪಡೆಯಾಗಿದೆ. ಕಾನ್ಪುರ ಮೂಲದ ಕಂಪನಿಯಾದ ಶ್ರೀಲಕ್ಷ್ಮಿ ಕಾಟ್ಸಿನ್ ಲಿಮಿಟೆಡ್ ಮತ್ತು ಕಂಪನಿಯ ಅಧ್ಯಕ್ಷ, ಮ್ಯಾನೇಜಿಂಗ್ ಡೈರೆಕ್ಟರ್ ಮಾತಾ ಪ್ರಸಾದ್ ಅಗರ್ವಾಲ್ ಸೇರಿದಂತೆ ಇತರರ ವಿರುದ್ಧ ಸಿಬಿಐ ದೂರು ದಾಖಲಿಸಿದೆ.
ಸುಮಾರು10 ಬ್ಯಾಂಕ್ಗಳಿಗೆ 6,833 ಕೋಟಿ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪ ಶ್ರೀಲಕ್ಷ್ಮಿ ಕಾಟ್ಸಿನ್ನ ಮಾತಾ ಪ್ರಸಾದ್ ಅಗರ್ವಾಲ್ ಮತ್ತು ಹಲವರ ಮೇಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾತಾ ಪ್ರಸಾದ್ ಅಗರ್ವಾಲ್ ಮಾತ್ರವಲ್ಲದೇ ಶ್ರೀಲಕ್ಷ್ಮಿ ಕಾಟ್ಸಿನ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಅಗರ್ವಾಲ್, ನಿರ್ದೇಶಕರಾದ ಶಾರದಾ ಅಗರ್ವಾಲ್, ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ದೇವೇಶ್ ನರೇನ್ ಗುಪ್ತಾ ಅವರ ವಿರುದ್ಧ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.