ನಾಗ್ಪುರ(ಮಹಾರಾಷ್ಟ್ರ):ಸ್ಟೆನೋಗ್ರಾಫರ್‌ಗಳಾಗಿ ಮತ್ತು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯಾಗಿ ಐಟಿ ವಿಭಾಗಕ್ಕೆ 2018ರಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆ ಬರೆಯದೇ ಸೇರಿದ್ದ 12 ಜನರ ವಿರುದ್ಧ ಎಸಿಬಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು.
12 ಜನರ ಉತ್ತರ ಪತ್ರಿಕೆಯಲ್ಲಿನ ಅಭ್ಯರ್ಥಿಗಳ ಕೈಬರಹ, ಸಹಿ ಮತ್ತು ಹೆಬ್ಬೆರಳಿನ ಗುರುತುಗಳನ್ನು ವಿಧಿ ವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿತ್ತು. ಇದರಲ್ಲಿ 9 ಜನ ಡಮ್ಮಿ ಅಭ್ಯರ್ಥಿಗಳ ಕೈಯಲ್ಲಿ ಪರೀಕ್ಷೆ ಬರೆಸಿರುವುದು ತಿಳಿದು ಬಂದಿದೆ.