ಕರ್ನಾಟಕ

karnataka

ETV Bharat / bharat

ಲಂಚ ಪಡೆದು ಅನರ್ಹರಿಗೆ ಶಸ್ತ್ರಾಸ್ತ್ರ ಪರವಾನಗಿ: ಐಎಎಸ್​ ಅಧಿಕಾರಿಯನ್ನು ಬಂಧಿಸಿದ ಸಿಬಿಐ - ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿ ಬಂಧನ

ಅನರ್ಹರಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲು ಲಂಚ ಪಡೆದ ಗಂಭೀರ ಪ್ರಕರಣದಲ್ಲಿ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ.

CBI arrests Gujarat cadre IAS officer  CBI arrests Gujarat cadre IAS officer in arms licence bribery case  Gujarat cadre IAS officer arrest  Gujarat cadre IAS officer arrest news  ಐಎಎಸ್​ ಅಧಿಕಾರಿಯನ್ನು ಬಂಧಿಸಿದ ಸಿಬಿಐ  ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿಯನ್ನು ಬಂಧಿಸಿದ ಸಿಬಿಐ  ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿ ಬಂಧನ  ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿ ಬಂಧನ ಸುದ್ದಿ
ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿಯನ್ನು ಬಂಧಿಸಿದ ಸಿಬಿಐ

By

Published : Jul 14, 2022, 7:45 AM IST

Updated : Jul 14, 2022, 9:00 AM IST

ನವದೆಹಲಿ: ಗಂಭೀರ ಸ್ವರೂಪದ ಭ್ರಷ್ಟಾಚಾರ ಪ್ರಕರಣದಡಿ 2011ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ಕಂಕಿಪತಿ ರಾಜೇಶ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಇದಕ್ಕೂ ಮುನ್ನ ಆರೋಪಿತ ಅಧಿಕಾರಿಯನ್ನು ವಿಚಾರಣೆಗಾಗಿ ಅಹಮದಾಬಾದ್‌ನ ಕಚೇರಿಗೆ ಕರೆಸಲಾಗಿತ್ತು. ವಿಚಾರಣೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆ.ರಾಜೇಶ್ ಗುಜರಾತ್​ ರಾಜ್ಯದ ಸುರೇಂದ್ರನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ಭೂ ವ್ಯವಹಾರ ಮತ್ತು ಅನರ್ಹರಿಗೆ ಶಸ್ತ್ರಾಸ್ತ್ರ ಪರವಾನಗಿ ಮಂಜೂರು ಮಾಡಲು ಲಂಚ ಪಡೆದಿದ್ದರು. ಮೇ ತಿಂಗಳಲ್ಲಿ ಇವರ​ ಪರವಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ರಫೀಕ್ ಮೆನನ್​ ಎಂಬಾತನನ್ನು ತನಿಖಾ ದಳ ಬಂಧಿಸಿತ್ತು.

ಇದನ್ನೂ ಓದಿ:ಎಂಟು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಸರ್ಕಾರಿ ಜಮೀನು ಮಂಜೂರಾತಿ ಹಾಗೂ ಅನರ್ಹ ಫಲಾನುಭವಿಗಳ ಹೆಸರಿಗೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನುಗಳನ್ನು ಸಕ್ರಮ ಮಾಡಿಕೊಡಲು ಅಧಿಕಾರಿ ರಾಕೇಶ್ ಲಂಚ ಪಡೆದಿದ್ದರು ಎನ್ನಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಕೋರಿಕೆಯ ಮೇರೆಗೆ ಪ್ರಾಥಮಿಕ ತನಿಖೆ ನಡೆಸಲಾಗಿತ್ತು.

Last Updated : Jul 14, 2022, 9:00 AM IST

ABOUT THE AUTHOR

...view details