ಕರ್ನಾಟಕ

karnataka

ETV Bharat / bharat

ವಿಚಿತ್ರ ಪ್ರಕರಣ : ಪುಣೆಯಲ್ಲಿ ಬೆಕ್ಕಿನ ಕೊಲೆ ; ಮಹಿಳೆ ವಿರುದ್ಧ ದಾಖಲಾಯ್ತು ಕೇಸ್​! - ಪುಣೆಯಲ್ಲಿ ಬೆಕ್ಕಿನ ಕೊಲೆ

ನೆರೆ ಮನೆಯ ಬೆಕ್ಕಿನ ಮರಿವೊಂದು ಮಹಿಳೆಯೋರ್ವಳ ಮನೆಯೊಳಗೆ ಹೋಗಿದ್ದಕ್ಕಾಗಿ ಅದರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಅದು ಸಾವನ್ನಪ್ಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Cat murder in Pune
Cat murder in Pune

By

Published : Apr 9, 2022, 7:18 PM IST

ಪುಣೆ(ಮಹಾರಾಷ್ಟ್ರ) :ನಾಲ್ಕು ತಿಂಗಳ ಬೆಕ್ಕಿನ ಮರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವಳ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಕ್ಕಿನ ಮರಣೋತ್ತರ ಪರೀಕ್ಷೆಯಲ್ಲಿ ಅದನ್ನ ಕೊಲೆ ಮಾಡಲಾಗಿದೆ ಎಂಬ ವಿಷಯ ಬಹಿರಂಗವಾದ ಬೆನ್ನಲ್ಲೇ ಎಫ್​ಐಆರ್ ದಾಖಲಾಗಿದೆ.

ಏಪ್ರಿಲ್​​ 2ರಂದು ಪುಣೆಯ ಗೋಖಲೆನಗರ ಪ್ರದೇಶದಲ್ಲಿ ಪ್ರಶಾಂತ್ ದತ್ತಾತ್ರೇಯ(53) ಎಂಬಾತ ನೀಡಿರುವ ದೂರಿನ ಮೇರೆಗೆ ಶಿಲ್ಪಾ ಎಂಬ ಯುವತಿ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆಯಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಗುಜರಾತ್​​ನಲ್ಲಿ 67 ವರ್ಷದ ವ್ಯಕ್ತಿಯಲ್ಲಿ ಕೋವಿಡ್​ನ ಎಕ್ಸ್​​ಇ ರೂಪಾಂತರಿ ಪತ್ತೆ

ಏನಿದು ಪ್ರಕರಣ? :ಪ್ರಕರಣ ದಾಖಲು ಮಾಡಿರುವ ವ್ಯಕ್ತಿಯ ಮನೆಯಲ್ಲಿ ಮೂರು ಬೆಕ್ಕಿನ ಮರಿಗಳಿದ್ದವು. ಇದರಲ್ಲಿ ಒಂದು ಮರಿ ಶಿಲ್ಪಾ ಎಂಬುವರ ಮನೆಯೊಳಗೆ ಹೋಗಿದೆ. ಈ ವೇಳೆ ಭಾರವಾದ ವಸ್ತುವಿನಿಂದ ಅದರ ತಲೆಗೆ ಹೊಡೆಯಲಾಗಿದೆ. ಪರಿಣಾಮ ಕೆಲ ಗಂಟೆಗಳ ನಂತರ ಅದು ಸಾವನ್ನಪ್ಪಿದೆ.

ಬೆಕ್ಕು ದಿಢೀರ್​ ಆಗಿ ಸಾವನ್ನಪ್ಪಿದ್ದರಿಂದ ಅದರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಅದರ ತಲೆಗೆ ಏಟು ಬಿದ್ದು ಸಾವನ್ನಪ್ಪಿರುವ ವಿಷಯ ಬಹಿರಂಗಗೊಂಡಿದೆ. ಹೀಗಾಗಿ, ಪ್ರಕರಣ ದಾಖಲು ಮಾಡಲಾಗಿದೆ.

ABOUT THE AUTHOR

...view details