ನವದೆಹಲಿ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟ ದೀಪ್ ಸಿಧು ಹೆಸರು ಕೇಳಿ ಬಂದಿದ್ದು, ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದ್ದಾರೆ.
ಸಿಧು ಜೊತೆ ಬುಟಾ ಸಿಂಗ್, ಸುಖದೇವ್ ಸಿಂಗ್ ಹಾಗೂ ಇನ್ನಿಬ್ಬರ ಮಾಹಿತಿಗೆ 50 ಸಾವಿರ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಎತ್ತಿ ಹಿಡಿಯಲು ಜನವರಿ 26 ರಂದು ರೈತ ಸಂಘಗಳು ಕರೆದ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಸಾವಿರಾರು ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು.
ಅನೇಕ ಪ್ರತಿಭಟನಾಕಾರರು, ಟ್ರ್ಯಕ್ಟರ್ಗಳನ್ನು ಓಡಿಸಿ, ಕೆಂಪು ಕೋಟೆಯನ್ನು ತಲುಪಿ ಸ್ಮಾರಕವನ್ನು ಪ್ರವೇಶಿಸಿದರು. ಕೆಲವು ಪ್ರತಿಭಟನಾಕಾರರು ಅದರ ಗುಮ್ಮಟಗಳ ಮೇಲೆ ಧಾರ್ಮಿಕ ಧ್ವಜಗಳನ್ನು ಹಾಗೂ ಅಲ್ಲಿನ ಕಮಾನಿನಲ್ಲಿ ಒಂದು ಧ್ವಜಸ್ತಂಭವನ್ನು ನೆಟ್ಟಿದ್ದರು.