ಕರ್ನಾಟಕ

karnataka

ETV Bharat / bharat

ಸಭಾಪತಿ ಜಗದೀಪ್​ ಧನಕರ್ ಅಣಕ ಪ್ರದರ್ಶನ: ದೆಹಲಿಯ 2 ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲು - ಪ್ರಕರಣ

ಸಂಸತ್ತಿನ ಮಕರ ದ್ವಾರದ ಮುಂದೆ ಲೋಕಸಭೆಯ ಟಿಸಿಎಂ ಸದಸ್ಯ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭಾ ಸಭಾಪತಿ ಧನಕರ್ ಅವರಂತೆ ಅಣಕ ಪ್ರದರ್ಶನ ಮಾಡಿರುವುದಕ್ಕೆ ದೆಹಲಿಯ ವಿವಿಧ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ.​

mimicking-vice-president-jagdeep-dhankhar
ಸಭಾಪತಿ ಜಗದೀಪ್​ ಧನಕರ್ ಅಣಕ ಪ್ರದರ್ಶನ

By ETV Bharat Karnataka Team

Published : Dec 20, 2023, 1:40 PM IST

ನವದೆಹಲಿ:ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್ ಅವರಂತೆ ಲೋಕಸಭೆಯ ಟಿಸಿಎಂ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಮಾಡಿರುವ ಅಣಕ ಪ್ರದರ್ಶನದ ವಿರುದ್ಧ ದೆಹಲಿಯ 2 ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಸತ್ತಿನ ಮಕರ ದ್ವಾರ ಮುಂದೆ ಇತರ ಅಮಾನತುಗೊಂಡ ಸಂಸದರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ಟಿಸಿಎಂ ಸದಸ್ಯ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭಾ ಸಭಾಪತಿ ಧನಕರ್ ಅವರಂತೆ ಅಣಕ ಪ್ರದರ್ಶನ ಮಾಡಿದ್ದರು. ಈ ದೃಶ್ಯವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಇತರರು ತಮ್ಮ ಮೊಬೈಲ್​ಗಳಲ್ಲಿ ಸೆರೆ ಹಿಡಿದಿದ್ದರು. ಇದಕ್ಕೆ ಧನಕರ್ ಅಸಮಾಧಾನ ಕೂಡಾ ವ್ಯಕ್ತಪಡಿಸಿದ ಬೆನ್ನಲ್ಲೇ ದೇಶದೆಲ್ಲೆಡೆ ಅಣಕ ಪ್ರದರ್ಶನಕ್ಕೆ ತೀವ್ರ ವಿರೊಧ ವ್ಯಕ್ತವಾಗುತ್ತಿದೆ.

ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಈ ರೀತಿ ಅವಮಾನಿಸಿರುವುದಕ್ಕೆ ಎರಡು ವಿಭಿನ್ನ ಪೊಲೀಸ್ ಠಾಣೆಗಳಲ್ಲಿ ಲಿಖಿತ ದೂರುಗಳನ್ನು ನೀಡಲಾಗಿದೆ. ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದ್ದರೆ, ಇನ್ನೊಂದು ದೂರು ನ್ಯೂ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಕೀಲರು ನೀಡಿದ ದೂರಿನಲ್ಲಿ ಭವಿಷ್ಯದಲ್ಲಿ ಯಾರೂ ಕೂಡ ಈ ರೀತಿ ಮಾಡದಂತೆ ದೇಶದ ಉಪರಾಷ್ಟ್ರಪತಿಯನ್ನು ತಮಾಷೆ ಮಾಡುವ, ಅನುಕರಣೆ ಮಾಡುವವರ ವಿರುದ್ಧ ಪೊಲೀಸರು ಕೈಗೊಳ್ಳಬೇಕು. ಗೌರವಾನ್ವಿತ ವ್ಯಕ್ತಿಯನ್ನು ಗೇಲಿ ಮಾಡುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಗೆ ಮಂಗಳವಾರ ಆಗಮಿಸಿದ ಕೆಲ ವಕೀಲರು ದೂರು ನೀಡಿದ್ದು ಸ್ವೀಕರಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆದರೆ ಇದಕ್ಕೆ ಸಂಬಂಧಿಸಿ ಈವರೆಗೆ ದಕ್ಷಿಣ ಜಿಲ್ಲೆ ಮತ್ತು ನವದೆಹಲಿ ಜಿಲ್ಲೆಯ ಡಿಸಿಪಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಬೇಸರ ವ್ಯಕ್ತಪಡಿಸಿರುವ ರೈತರು:ಈ ಅಣಕ ಪ್ರದರ್ಶನಕ್ಕೆ ಜಗದೀಪ್​ ಧನಕರ್ ಪ್ರತಿಕ್ರಿಯೆ ನೀಡಿದ್ದು, ’’ ಸಭಾಪತಿಯವರ ಅಣಕ, ಸಭಾಧ್ಯಕ್ಷರ ಅಣಕ. ಎಷ್ಟು ಹಾಸ್ಯಾಸ್ಪದ, ಎಷ್ಟು ಅವಮಾನಕರ ಹಾಗೂ ಇದು ಸ್ವೀಕಾರಾರ್ಹವಲ್ಲ. ತಮ್ಮನ್ನು ಅವಮಾನಿಸಿದ್ದಕ್ಕಾಗಿ ಇದು ರೈತರಿಗೆ ಮಾಡಿದ ಅವಮಾನ‘‘ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ರೈತರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೈತ ವರ್ಗಕ್ಕೆ ಸೇರಿದ ಭಾರತ ದೇಶದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕ ಮಾಡಿರುವುದರಿಂದ ಅವರ ಗೌರವಕ್ಕೆ ಧಕ್ಕೆಯಾಗಿದೆ ಎಂದು 360 ಗ್ರಾಮಗಳ ಮುಖ್ಯಸ್ಥ ಚೌಧರಿ ಸುರೇಂದ್ರ ಸೋಲಂಕಿ ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯಸಭಾ ಸಭಾಪತಿಯಂತೆ ಅಣಕ ಪ್ರದರ್ಶನ ಮಾಡಿದ ಟಿಎಂಸಿ ಸದಸ್ಯ: ಸ್ವೀಕಾರಾರ್ಹವಲ್ಲ ಎಂದ ಧನಕರ್

ABOUT THE AUTHOR

...view details