ನಾಸಿಕ್(ಮಹಾರಾಷ್ಟ್ರ):ಶಿವಸೇನೆ (ಉದ್ಧವ್ ಠಾಕ್ರೆ ಬಣದ) ಸಂಸದ ಸಂಜಯ್ ರಾವುತ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ "ಸ್ತೋತ್ರ" ಪದವನ್ನು ಬಳಸಿ ಮುಖ್ಯಮಂತ್ರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಸಂಜಯ್ ರಾವುತ್ ವಿರುದ್ಧ ಶಿಂಧೆ ಬಣದ ಪದಾಧಿಕಾರಿ ಯೋಗೇಶ್ ಬೆಲ್ದಾರ್ ದೂರು ನೀಡಿದ್ದಾರೆ. ದೂರಿನ ಅನ್ವಯ ನಾಸಿಕ್‌ನ ಪಂಚವಟಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 500 ಅಡಿ ಪ್ರಕರಣ ದಾಖಲಾಗಿದೆ.
ಪಕ್ಷದ ಹೆಸರು 'ಶಿವಸೇನೆ' ಹಾಗೂ ಪಕ್ಷದ ಚಿಹ್ನೆ 'ಬಿಲ್ಲು ಮತ್ತು ಬಾಣ'ವನ್ನು ಏಕನಾಥ್ ಶಿಂಧೆ ಬಣ ಉಳಿಸಿಕೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಇದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ರಾಜಕೀಯ ವಿವಾದದ ನಂತರ ಉದ್ಧವ್ ಠಾಕ್ರೆ ಅವರು ಮಾತೋಶ್ರೀಯಿಂದ ಹೊರಬಂದು ಕಾರ್ಯಕರ್ತರೊಂದಿಗೆ ಶನಿವಾರ ಮಧ್ಯಾಹ್ನ ಸಂವಾದ ನಡೆಸಿದರು.
ಆ ಸಮಯದಲ್ಲಿ ಉದ್ಧವ್ ಠಾಕ್ರೆ ಅವರ ಭಾಷಣವನ್ನು ಶಿಂಧೆ ಬಣ ಮತ್ತು ಬಿಜೆಪಿ ನಾಯಕರು ಟೀಕಿಸಿದರು. ಈ ಕುರಿತು ಮಾತನಾಡಿದ ರಾವುತ್, 'ಶಿಂಧೆ ಅವರಿಂದ ಸ್ತೋತ್ರ ನಡೆಯುತ್ತಿದೆ ಮತ್ತು ಅವರು ನಮಗೆ ಜ್ಞಾನವನ್ನು ನೀಡುತ್ತಿದ್ದಾರೆ. ಅವರು ಇಂದು ಮನೆಗೆ ಹೋಗಲು ಸಿದ್ಧರಿಲ್ಲ. ಈ ಬಗ್ಗೆ ಅಮಿತ್ ಶಾಗೆ ಅರಿವಿಲ್ಲದಿದ್ದರೆ ಶಾ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದರು.
ಇದನ್ನೂ ಓದಿ:ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಏಕನಾಥ್ ಶಿಂಧೆ ಭೇಟಿ: ಪುಷ್ಪ ನಮನ ಸಲ್ಲಿಕೆ