ಕರ್ನಾಟಕ

karnataka

ETV Bharat / bharat

ತಪ್ಪಾಗಿ ಹೆಸರು ಉಲ್ಲೇಖ: ಡಿಎಂಕೆ ಸಂಸದನ ಅಮಾನತು ವಾಪಸ್​ ಪಡೆದ ಸರ್ಕಾರ

Govt decides to withdraw suspension of DMKs SR Parthiban from LS: ಲೋಕಸಭೆಯಿಂದ ಗುರುವಾರ ಅಮಾನತುಗೊಂಡ 14 ಜನ ಸಂಸದರ ಪೈಕಿ ಡಿಎಂಕೆ ಸಂಸದ ಎಸ್‌.ಆರ್‌.ಪಾರ್ಥಿಬನ್‌ ಅವರ ಅಮಾನತನ್ನು ಸರ್ಕಾರ ವಾಪಸ್​ ಪಡೆದಿದೆ.

Case of mistaken identity: Govt decides to withdraw suspension of DMKs SR Parthiban from LS
ತಪ್ಪಾಗಿ ಹೆಸರು ಉಲ್ಲೇಖ: ಡಿಎಂಕೆ ಸಂಸದನ ಅಮಾನತು ವಾಪಸ್​ ಪಡೆದ ಸರ್ಕಾರ

By ETV Bharat Karnataka Team

Published : Dec 14, 2023, 9:47 PM IST

ನವದೆಹಲಿ:ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ಲೋಪ ಪ್ರಕರಣ ಸಂಬಂಧ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಲೋಕಸಭೆಯಿಂದ 14 ಜನ ಸಂಸದರು ಹಾಗೂ ರಾಜ್ಯಸಭೆಯಿಂದ ಒಬ್ಬರು ಸೇರಿ 15 ಮಂದಿ ಸಂಸದರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಆದರೆ, ಈ ಪೈಕಿ ಡಿಎಂಕೆ ಸಂಸದ ಎಸ್‌.ಆರ್‌.ಪಾರ್ಥಿಬನ್‌ ಅವರ ಅಮಾನತು ವಾಪಸ್​ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಲೋಕಸಭೆ ಕಲಾಪಕ್ಕೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ್ದ ಕುರಿತಾದ ಭದ್ರತಾ ಲೋಪದ ಬಗ್ಗೆ ಇಂದು ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳಲ್ಲೂ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಘಟನೆ ಕುರಿತು ಸರ್ಕಾರ ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್​ ಸೇರಿ ಇತರ ಪಕ್ಷಗಳ ನಾಯಕರು ಆಗ್ರಹಿಸಿದರು. ಈ ವೇಳೆ, ಗದ್ದಲದ ವಾತಾವರಣ ಉಂಟಾಗಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿ ಉಭಯ ಸದನಗಳಿಂದ ಒಟ್ಟಾರೆ 15 ಸದಸ್ಯರನ್ನು ಅಮಾನತು ಮಾಡುವ ನಿರ್ಣಯ ಅಂಗೀಕರಿಸಲಾಗಿತ್ತು.

ಇದನ್ನೂ ಓದಿ:ಸಂಸತ್ ಭವನದ ಭದ್ರತಾ ಲೋಪ ಪ್ರಕರಣ: 7 ದಿನ ಪೊಲೀಸ್ ಕಸ್ಟಡಿಗೆ ನಾಲ್ವರು ಆರೋಪಿಗಳು

ಆದರೆ, ಡಿಎಂಕೆ ಸಂಸದ ಎಸ್‌.ಆರ್‌.ಪಾರ್ಥಿಬನ್‌ ಅವರು ಸದನದಲ್ಲಿ ಗೈರುಹಾಜರಾಗಿದ್ದರಿಂದ ಮತ್ತು ತಪ್ಪಾಗಿ ಅಮಾನತುಗೊಂಡ ಜೊತೆಗೆ ಅವರ ಹೆಸರು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಚಳಿಗಾಲದ ಅಧಿವೇಶನ ಅಥವಾ ಸಂಸತ್ತಿನ ಉಳಿದ ಅವಧಿಯವರೆಗೆ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆಯು 14ಕ್ಕೆ ಇಳಿಕೆಯಾಗಲಿದೆ.

ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು?:ಈ ಕುರಿತು ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸದಸ್ಯರನ್ನು ಗುರುತಿಸುವಲ್ಲಿ ಸಿಬ್ಬಂದಿಯ ಕಡೆಯಿಂದ ತಪ್ಪಾಗಿರುವ ಕಾರಣ ಪಾರ್ಥಿಬನ್ ಹೆಸರನ್ನು ಅಮಾನತುಗೊಳಿಸಿದ ಲೋಕಸಭಾ ಸದಸ್ಯರ ಪಟ್ಟಿಯಿಂದ ಹಿಂಪಡೆಯಲಾಗಿದೆ. ತಪ್ಪಾದ ಗುರುತಿನ ಪ್ರಕರಣವಾಗಿರುವುದರಿಂದ ಆ ಸದಸ್ಯರ ಹೆಸರನ್ನು ಕೈಬಿಡುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದೇವೆ. ಅಲ್ಲದೇ, ಈ ಮನವಿಗೆ ಸ್ಪೀಕರ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಸದನದ ಕಲಾಪ ಹೊಸ ಸಂಸತ್ ಭವನಕ್ಕೆ ಸ್ಥಳಾಂತರಗೊಂಡಾಗ ಸದನದಲ್ಲಿ ಭಿತ್ತಿಪತ್ರಗಳನ್ನು ತೋರಿಸದಿರುವ ಹೊಸ ಸಂಕಲ್ಪದೊಂದಿಗೆ ಸದಸ್ಯರು ಕೆಲಸ ಮಾಡಬೇಕು ಎಂದು ಸ್ಪೀಕರ್ ಅವರು ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಸೂಚಿಸಿದ್ದರು. ಆದರೆ, ಸಂಸದರು ಬಿಎಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಉಲ್ಲಂಘಿಸಿ ಸದನಕ್ಕೆ ಫಲಕಗಳನ್ನು ತಂದಿದ್ದರು. ಆದ್ದರಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

ಅಮಾನತುಗೊಂಡ ಸಂಸದರು:ಲೋಕಸಭೆಯಿಂದ ಅಮಾನತುಗೊಂಡ ಸಂಸದರಲ್ಲಿ ಟಿ.ಎನ್.ಪ್ರತಾಪನ್, ಹಿಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್, ಬೆನ್ನಿ ಬೆಹನನ್, ವಿಕೆ ಶ್ರೀಕಂದನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನಿಮೊಳಿ ಕರುಣಾನಿಧಿ, ಕೆ ಸುಬ್ರಹ್ಮಣ್ಯಂ, ಎಸ್ ವೆಂಕಟೇಶನ್ ಮತ್ತು ಮಾಣಿಕಂ ಟ್ಯಾಗೋರ್​ ಸೇರಿದ್ದಾರೆ. ಅದೇ ರೀತಿಯಾಗಿ ರಾಜ್ಯಸಭೆಯಲ್ಲಿಅಶಿಸ್ತಿನ ವರ್ತನೆ ಮತ್ತು ಸಭಾಪತಿಯ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಅವರನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ:ಲೋಕಸಭೆಯಿಂದ 14​ ಸಂಸದರ ಅಮಾನತು; ರಾಜ್ಯಸಭೆಯಿಂದ ಡೆರೆಕ್ ಒಬ್ರಿಯಾನ್ ಸಸ್ಪೆಂಡ್

ABOUT THE AUTHOR

...view details