ವಾರಣಾಸಿ:ಇಲ್ಲಿನ ಭೆಲುಪುರ್ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಪ್ರಕರಣದಲ್ಲಿ ಅತ್ಯಂತ ಜನಪ್ರಿಯ ಗೂಗಲ್ ನಿರ್ದೇಶಕ ಮತ್ತು ಸಿಇಒ ಸುಂದರ್ ಪಿಚೈ ಹೆಸರು ಸಹ ಇದೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಪ್ರಕರಣ ದಾಖಲು ಹೌದು, ಗೌರಿಗಂಜ್ ಪ್ರದೇಶದ ನಿವಾಸಿ ಗಿರ್ಜಾ ಶಂಕರ್ ಜೈಸ್ವಾಲ್ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ 17 ಜನರ ವಿರುದ್ಧ ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಪ್ರಕರಣ ದಾಖಲು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಮತ್ತು ವಾರಣಾಸಿ ಸಂಸದರೊಬ್ಬರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಬಳಸಿ ವಿಡಿಯೋವೊಂದನ್ನು ಹಾಕಿದ್ದರು. ಇದನ್ನು ವಿರೋಧಿಸಿದ ಗಿರ್ಜಾ ಶಂಕರ್ಗೆ ಒಟ್ಟು 8,000 ಬೆದರಿಕೆ ಕರೆಗಳು ಬಂದಿವೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೆಚ್ಚುವರಿ ಮುಖ್ಯ ನ್ಯಾಯಾಂಗ 3ನೇ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಭೆಲುಪುರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಪ್ರಕರಣ ದಾಖಲು ನ್ಯಾಯಾಲಯದ ಆದೇಶದ ಮೇರೆಗೆ ಐಟಿ ಕಾಯ್ದೆಯಡಿ ವಿಶಾಲ್, ಸಪ್ನಾ, ಚಂದನ್, ಸುಜಿತ್ ಗೌತಮ್, ಹೃದಯರಾಜ್ ಕಪೂರ್, ಸಿ.ಎಸ್.ಬಾದಲ್, ಸಂಜೀವ್ ಕುಮಾರ್, ಸೂರಜ್ ಕೃಷ್ಣ, ಆಶಿಶ್ ನಾಯರ್, ಎಸ್.ಎನ್. ಬೌದ್ಧ, ಬಿ.ಜಿ ಮ್ಯೂಸಿಕ್ ಕಂಪನಿ, ವಿಕೆ ಸಿಂಗ್, ಪಂಕಜ್, ಜೈ ಭೀಮ್ ರೆಕಾರ್ಡಿಂಗ್ ಸ್ಟುಡಿಯೋ, ಗೂಗಲ್ ಸಿಇಒ ಸುಂದರ್ ಪಿಚೈ , ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ಮತ್ತು ಸಿಇಒ ಸಂಜಯ್ ಕುಮಾರ್ ಸೇರಿದಂತೆ ಒಟ್ಟು 17 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಪ್ರಕರಣ ದಾಖಲು ಸೋಷಿಯಲ್ ಮೀಡಿಯಾದಲ್ಲಿ ಸಾಂಗ್ ವೈರಲ್
ಘಾಜಿಪುರದ ನೊನ್ಹ್ರಾದ ವಿಶುನ್‌ಪುರದ ನಿವಾಸಿ ವಿಶಾಲ್ ಗಾಜಿಪುರಿ ಅಲಿಯಾಸ್ ವಿಶಾಲ್ ಸಿಂಗ್ ತಮ್ಮ ಪತ್ನಿ ಸಪ್ನಾ ಬೌದ್ಧರೊಂದಿಗೆ ಹಾಡವೊಂದನ್ನು ಹಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನ ಮಂತ್ರಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದ್ದು, ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಆರ್ಥಿಕ ಸಹಾಯ ಪಡೆಯಲಾಗುತ್ತಿದೆ ಎಂದು ಗಿರ್ಜಾ ಶಂಕರ್ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಬಳಿಕ ಇವರಿಗೆ ಒಟ್ಟು 8 ಸಾವಿರ ಬೆದರಿಕೆ ಕರೆಗಳು ಬಂದಿವೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಪ್ರಕರಣ ದಾಖಲು