ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಮನೆ-ಮನೆ ಪ್ರಚಾರ ನಡೆಸುವಾಗ ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕೊರೊನಾ ನಿಯಂತ್ರಿಸಲು ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುವ ಆದೇಶಗಳ ಉಲ್ಲಂಘಿಸಿರುವ ಹಿನ್ನೆಲೆ ಸಹಾಯಕ ಡಿಸಿಪಿ ಗೆ ಜಿಲ್ಲಾ ಚುನಾವಣಾಧಿಕಾರಿ ಬರೆದ ಪತ್ರ ಆಧರಿಸಿ ದೂರು ದಾಖಲಾಗಿದೆ.