ಮುಂಬೈ, ಮಹಾರಾಷ್ಟ್ರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಕುಮಾರ್ ಖರಾ ಅವರಿಗೆ ಅಪಹರಣ ಮತ್ತು ಕೊಲೆ ಬೆದರಿಕೆಗಳು ಬಂದಿವೆ. ಅಪರಿಚಿತ ವ್ಯಕ್ತಿ ಬ್ಯಾಂಕ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಕ್ಟೋಬರ್ 13 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆಯ ನಂತರ ಪ್ರಕರಣವನ್ನು ದಾಖಲಿಸಲಾಗಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್ 13ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ. ನನಗೆ ಸಾಲ ನೀಡಬೇಕೆಂದು ಎಂದು ಆರೋಪಿ ಒತ್ತಾಯಿಸಿದ್ದಾನೆ. ಸಾಲ ಮಂಜೂರು ಮಾಡದಿದ್ದರೆ ಬ್ಯಾಂಕ್ ಅಧ್ಯಕ್ಷರನ್ನೇ ಕಿಡ್ನಾಪ್ ಮಾಡಿ ಕೊಂದು ಹಾಕುತ್ತೇನೆ. ಅಷ್ಟೇ ಅಲ್ಲ ನಿಮ್ಮ ಪ್ರಧಾನ ಕಚೇರಿಯನ್ನು ಬಾಂಬ್ನಿಂದ ಉಡಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.