ಕೋಝಿಕೋಡ್ :ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ವಡಗರ ಸಿಪಿಎಂ ನಾಯಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸಿಪಿಎಂ ಮುಳ್ಳಿಯೇರಿ ಬ್ರಾಂಚ್ ಪುಲ್ಲುಲಾ ಪರಂಬಾತ್ ಬಾಬುರಾಜ್ ಮತ್ತು ಡಿವೈಎಫ್ಐ ಪದಿಯರಕ್ಕರ ಪ್ರದೇಶ ಕಾರ್ಯದರ್ಶಿ ತೆಕ್ಕೆ ಪರಂಬತ್ ಲಿಜೇಶ್ ಆರೋಪಿಗಳಾಗಿದ್ದಾರೆ.
ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಬಾಬುರಾಜ್, ನಾನು ಒಂಟಿಯಾಗಿದ್ದಾಗ ರಾತ್ರಿ 11 ಗಂಟೆಯ ಸುಮಾರಿಗೆ ಮನೆಯೊಳಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ವಿಷಯವನ್ನು ನನ್ನ ಪತಿ ಮತ್ತು ಸ್ಥಳೀಯರಿಗೆ ತಿಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿ, ನನ್ನ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ ಮಹಿಳೆ ಆರೋಪಿಸಿದ್ದಾರೆ.
ಇದಾದ ಬಳಿಕ, ಡಿವೈಎಫ್ಐ ನಾಯಕ ಲಿಜೇಶ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಸಿಪಿಎಂ ಬ್ರಾಂಚ್ ಕಾರ್ಯರ್ಶಿ ನನ್ನ ಮೇಲೆ ದೌರ್ಜನ್ಯ ನಡೆಸಿದ ವಿಷಯವನ್ನು ಹೇಳಿ ನನ್ನನ್ನು ಹೆದರಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.