ಮುಂಬೈ (ಮಹಾರಾಷ್ಟ್ರ):ಅಗತ್ಯ ಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ಕೊರೊನಾ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಾಲಿವುಡ್ ನಟ ಟೈಗರ್ ಶ್ರಾಫ್ ವಿರುದ್ಧ ನಿನ್ನೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆ: ನಟ ಟೈಗರ್ ಶ್ರಾಫ್ ವಿರುದ್ಧ ಪ್ರಕರಣ - ಮಹಾರಾಷ್ಟ್ರ
ನಟ ಟೈಗರ್ ಶ್ರಾಫ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುವ ಮೂಲಕ ಕೊರೊನಾ ಲಾಕ್ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ ಹಿನ್ನೆಲೆ ಪೊಲೀಸರು ಇವರ ಮೇಲೆ ಕ್ರಮ ಕೈಗೊಂಡಿದ್ದಾರೆ.
case-against-tiger-shroff-for-flouting-covid-rules
ಕೊರೊನಾ ತಡೆಯಲು ಲಾಕ್ಡೌನ್ ವಿಧಿಸಲಾಗಿದೆ. ಆದ್ರೆ, ಸಂಜೆ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಬಳಿ ಶ್ರಾಫ್ ತಿರುಗಾಡುತ್ತಿರುವುದು ಕಂಡುಬಂದಿದೆ.
ಇದನ್ನು ಗಮನಿಸಿದ ಪೊಲೀಸರು ಪ್ರಶ್ನಿಸಿದಾಗ, ನಟ ಸರಿಯಾದ ಉತ್ತರ ನೀಡಿಲ್ಲ. ಈ ಹಿನ್ನೆಲೆ ಪೊಲೀಸರು ನಟನ ವಿವರಗಳನ್ನು ತೆಗೆದುಕೊಂಡು ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.