ಸತಾರಾ(ಮಹಾರಾಷ್ಟ್ರ):ಅತ್ಯಾಚಾರಕ್ಕೊಳಗಾಗಿದ್ದ 15 ವರ್ಷದ ಬಾಲಕಿಗೆ ಜನಿಸಿದ ಹೆಣ್ಣುಮಗುವನ್ನು ಕಾನೂನು ಬಾಹಿರವಾಗಿ ದತ್ತು ನೀಡಲು ಮುಂದಾಗಿದ್ದ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಮಹಾಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಬಾಲಕಿ ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದಾಳೆ. ಆಕೆಯ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ತಿಳಿಯುವ ವೇಳೆಗೆ ಬಾಲಕಿ ಅಬಾರ್ಷನ್(ಗರ್ಭಪಾತ)ಅವಧಿ ಮುಗಿದು ಹೋಗಿತ್ತು. ಆಗ ಅತ್ಯಾಚಾರಿಗಳ ಹೆಸರುಗಳನ್ನು ಅಪ್ರಾಪ್ತೆ ಬಹಿರಂಗಪಡಿಸಿದ ಬಳಿಕ, ಕುಟುಂಬವು ಅವರನ್ನು ಕರೆಸಿ ಮಾತುಕತೆ ನಡೆಸಿತ್ತು. ಮಗುವನ್ನು ಇತರರಿಗೆ ದತ್ತು ನೀಡಲು ಕುಟುಂಬಕ್ಕೆ ಸಹಾಯ ಮಾಡಲು ಇಬ್ಬರೂ ಒಪ್ಪಿದ್ದಾರೆ. ಬಾಲಕಿ, ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವನ್ನು ಮುಂಬೈ ಮೂಲದ ದಂಪತಿಗೆ ನೀಡಲು ಯತ್ನಿಸಿದರು. ದತ್ತು ಪಡೆಯುವ ಕಾನೂನು ವಿಧಾನವನ್ನು ಅನುಸರಿಸದೆ ಇದ್ದುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.