ಲಕ್ನೋ(ಉತ್ತರ ಪ್ರದೇಶ):ಹಣದ ವ್ಯವಹಾರಕ್ಕಾಗಿ ಕಾರ್ಪೆಂಟರ್ ಹಾಗೂ ವೈದ್ಯನ ಪತ್ನಿಯ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ಈಗಾಗಲೇ ಆರೋಪಿಯ ಸಹಚರರ ಬಂಧನ ಮಾಡಲಾಗಿದೆ.
ಇಲ್ಲಿನ ಗೋಮತಿ ನಗರದ ವಿಶ್ವವಾಸ್ ಬ್ಲಾಕ್ನಲ್ಲಿರುವ ಡಾ. ಹರ್ಷ ಅಗರವಾಲ್ ಅವರ ಪತ್ನಿ ರುಚಿ ಅಗರ್ವಾಲ್ ಅವರನ್ನು ಚಾಕುವಿನಿಂದ ಹತ್ಯೆ ಮಾಡಿದ್ದಾರೆ. ಘಟನೆ ನಡೆದಾಗ ರುಚಿ ಅಗರ್ವಾಲ್ ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಣದ ವ್ಯವಹಾರದ ಬಗ್ಗೆ ಕಾರ್ಪೆಂಟರ್ ಮತ್ತು ರುಚಿ ಅಗರ್ವಾಲ್ ನಡುವೆ ವಿವಾದವಿತ್ತು. ಇದೀಗ ಆರೋಪಿಯ ಸಹಚರರಿಬ್ಬರ ಬಂಧನ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: PAN-Aadhaar ಲಿಂಕ್ಗೆ ನೀಡಲಾಗಿದ್ದ ದಿನಾಂಕ ವಿಸ್ತರಣೆ: ಇಲ್ಲಿಯವರೆಗೆ ಕಾಲಾವಕಾಶ..
ಮೃತ ರುಚಿ ಅಗರ್ವಾಲ್ ಅವರ ಮಾವ ನರೇಶ್ ಅಗರ್ವಾಲ್ ಪ್ರಕಾರ, ರುಚಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದು, ಅವರ ಮನೆಯಲ್ಲಿ ಎರಡು ತಿಂಗಳಿಂದ ಮನೆಯ ನೆಲ ಮಹಡಿಯಲ್ಲಿ ಕೆಲಸ ನಡೆಯುತ್ತಿತ್ತು. ಕಾರ್ಪೆಂಟರ್ ತನ್ನ ಸಹೋದ್ಯೋಗಿಗಳೊಂದಿಗೆ ಪೀಠೋಪಕರಣ ಕೆಲಸ ಮಾಡುತ್ತಿದ್ದನು. ಹಣದ ವಹಿವಾಟಿನ ಬಗ್ಗೆ ಗಲಾಟೆ ನಡೆದಿದ್ದು, ಹಣ ನೀಡುವಂತೆ ರುಚಿ ಬಳಿ ಬೇಡಿಕೆಯಿಟ್ಟಿದ್ದನು. ಆದರೆ ಕೆಲಸ ಮುಗಿದ ನಂತರವೇ ಹಣ ನೀಡುವುದಾಗಿ ರುಚಿ ಹೇಳಿದ್ದಳು. ವಿವಾದ ಉಲ್ಭಣಗೊಳ್ಳುತ್ತಿದ್ದಂತೆ ಕಾರ್ಪೆಂಟರ್ ರುಚಿಗೆ ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಜತೆಗೆ ಮಕ್ಕಳಿಗೆ ಬೆದರಿಕೆ ಹಾಕಿ, ಕೋಣೆಯ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.