ಸಾಹಿಬ್‌ಗಂಜ್:ಅಂತಾರಾಜ್ಯ ದೋಣಿ ಸೇವೆ ಘಾಟ್ ಸಾಹಿಬ್‌ಗಂಜ್ ಮತ್ತು ಮಣಿಹಾರಿ ನಡುವೆ ಸಾಗುತ್ತಿದ್ದ ಕಾರ್ಗೋ ಹಡಗು ಭಾಗಶಃ ಮುಳುಗಿದೆ. ಗುರುವಾರ ರಾತ್ರಿ 12 ರಿಂದ 1:00 ರ (ಇಂದು ನಸುಕಿನ ಜಾವ) ನಡುವೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ದುರ್ಘಟನೆಯಲ್ಲಿ ಕಲ್ಲುಗಳು ಮತ್ತು ಚಿಪ್ಸ್ ತುಂಬಿದ 9ಕ್ಕೂ ಹೆಚ್ಚು ಟ್ರಕ್‌ಗಳು ಹಾಗೂ ಅನೇಕ ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಟ್ರಕ್‌ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡುಗು ನೀರುಪಾಲು ಓದಿ:ಕೆಎಎಸ್ ಅಧಿಕಾರಿ ಮನೆ, ಟ್ರಸ್ಟ್, ಶಾಲೆ ಮೇಲೆ ದಾಳಿ ನಡೆಸಿದ ಎಸಿಬಿ!
ಏನಿದು ಘಟನೆ:ಸಿಕ್ಕಿರುವ ಮಾಹಿತಿ ಪ್ರಕಾರ, ರಾತ್ರಿ ಹೆಚ್ಚು ಟ್ರಿಪ್ ಹೊಡೆದು ಹಣ ಗಳಿಸಲು ಯತ್ನಿಸಿದ್ದಾರೆ ಎಂಬ ಅನುಮಾನ ಮೂಡಿದೆ. ರಾತ್ರಿ 12ರಿಂದ 1 ಗಂಟೆಯವರೆಗೆ ಗರಂ ಘಾಟ್‌ನಿಂದ ಸರಕು ಸಾಗಣೆ ಹಡಗು ಕಾರ್ಗೋದಲ್ಲಿ 17 ಓವರ್‌ಲೋಡ್ ಟ್ರಕ್ ತುಂಬಿಕೊಂಡು ಮಣಿಹಾರಿಗೆ ಸಾಗುತ್ತಿತ್ತು. ಗಂಗೆಯ ಮಧ್ಯದಲ್ಲಿ ಬಲವಾದ ಗಾಳಿ ಬೀಸಿದ ಕಾರಣ ಹಡಗು ನಿಯಂತ್ರಣ ಕಳೆದುಕೊಂಡಿದ್ದು, ಅರ್ಧ ಭಾಗ ನೀರಿನಲ್ಲಿ ಮುಳುಗಿದೆ. ಈ ವೇಳೆ 9 ಟ್ರಕ್‌ಗಳು ಗಂಗಾನದಿಯ ಮಧ್ಯದಲ್ಲಿ ನೀರುಪಾಲಾಗಿವೆ. ಅದರ ಜೊತೆ ಡ್ರೈವರ್ ಮತ್ತು ಕ್ಲಿನರ್ ಸೇರಿದಂತೆ ಹಲವು ಮಂದಿ ನೀರುಪಾಲು ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಓದಿ:ನ್ಯಾಯಾಲಯ ತನ್ನೆಲ್ಲ ಮಿತಿಗಳನ್ನು ಮೀರಿದೆ: ಅಧಿಕಾರ ವಿಕೇಂದ್ರೀಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಜಗನ್ ಘೋಷಣೆ
ಇನ್ನು ಈ ಸುದ್ದಿ ಮುಫಾಸಿಲ್ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜನರನ್ನು ರಕ್ಷಿಸಲು ರಕ್ಷಣಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ರಾತ್ರಿ ವೇಳೆ ಸರಕು ಸಾಗಣೆ ನೌಕೆ ನಡೆಸುವುದು ಕಾನೂನು ಬಾಹಿರವಾಗಿದೆ. ದೊಡ್ಡ ದುರಂತವಾಗಿರುವ ಕಾರಣಕ್ಕೆ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.