ಪಾಲ್ಘರ್ (ಮಹಾರಾಷ್ಟ್ರ) :ದೇಶಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಹಲವೆಡೆ ಭಾರಿ ಅವಘಡಗಳು ಸಂಭವಿಸಿವೆ. ಪಾಲ್ಘರ್ ಜಿಲ್ಲೆಯ ರೈಲ್ವೆ ನಿಲ್ದಾಣದ ಸಮೀಪ ಸಂಚರಿಸುತ್ತಿದ್ದ ಕಾರೊಂದು ಚಾಲಕ ಸಹಿತ ಹೊಳೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ಕಾರು ಹೊಳೆ ಮೂಲಕ ಸಂಚರಿಸುತ್ತಿತ್ತು. ಈ ವೇಳೆ ಏಕಾಏಕಿ ನೀರು ಹರಿದು ಬಂದಿದೆ. ನೀರಿನ ರಭಸಕ್ಕೆ ಕಾರು ಚಾಲಕನ ಸಮೇತ ಕೊಚ್ಚಿ ಹೋಗಿದೆ. ಈ ವೇಳೆ ತಕ್ಷಣ ಕಾರಿಗೆ ಹಗ್ಗ ಕಟ್ಟಿದ ಸ್ಥಳೀಯರು ನೀರಿನಿಂದ ಮೇಲಕ್ಕೆಳೆದಿದ್ದಾರೆ.