ಕರ್ನಾಟಕ

karnataka

ETV Bharat / bharat

ದಿಢೀರ್ ಶ್ರೀಮಂತರಾಗಲು ಕಾರು ಕದ್ದು ಸಿಕ್ಕಿಬಿದ್ದ ಸ್ನೇಹಿತರು..ಇವರು ಬಿ.ಟೆಕ್​ ಪದವೀದರರು ಎಂದರೆ ನೀವು ನಂಬ್ತೀರಾ? - ಮಾರುತಿ ವ್ಯಾನ್ ಕಾರ

ಇಬ್ಬರು ಬಿಟೆಕ್ ವಿದ್ಯಾರ್ಥಿಗಳು ಸೇರಿ ಮೂವರು ಕಳ್ಳರು ಉತ್ತರಪ್ರದೇಶದ ಕಾನ್ಪುರ ನಗರದ ದಬೌಲಿ ಪ್ರದೇಶದಿಂದ ಕಾರು ಕಳ್ಳತನ ಮಾಡಿದ್ದರು. ಸ್ಟಾರ್ಟ್ ಆಗದಿದ್ದಾಗ ಮೂವರು ಸೇರಿ ಅದನ್ನು 17 ಕಿಲೋಮೀಟರ್ ದೂರ ತಳ್ಳಿಕೊಂಡು ನಾಪತ್ತೆಯಾಗಿದ್ದರು. ಈ ಮೂವರು ಕಳ್ಳರನ್ನು ಮಂಗಳವಾರ ಸಂಜೆ  ಪೊಲೀಸರು ಬಂಧಿಸಿದ್ದಾರೆ.

car theft thieves
ಕಾರು ಕದ್ದು ಸಿಕ್ಕಿಬಿದ್ದ ಕಳ್ಳರು

By

Published : May 24, 2023, 10:01 PM IST

ಕಾನ್ಪುರ(ಉತ್ತರಪ್ರದೇಶ):ನಗರದ ಬರ್ರಾ ಪೊಲೀಸ್ ಠಾಣೆ ವ್ಯಾಪ್ತಿ ದಬೌಲಿ ಪ್ರದೇಶದಲ್ಲಿ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಟೆಕ್ ವಿದ್ಯಾರ್ಥಿಗಳು ಸೇರಿ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಕಾನ್ಪುರ ನಗರದ ದಬೌಲಿ ಪ್ರದೇಶದಿಂದ ದಿಢೀರ್ ಶ್ರೀಮಂತರಾಗಬೇಕು ಎಂದು ಇಬ್ಬರು ಬಿಟೆಕ್ ವಿದ್ಯಾರ್ಥಿಗಳು ಸೇರಿ ಮೂವರು ಸ್ನೇಹಿತರು ಕಾರನ್ನು ಕಳವು ಮಾಡಿದ್ದರು. ಕಳ್ಳರು ಕಾರನ್ನು ಕದಿಯಲು ಯತ್ನಿಸಿದಾಗ ಅದು ಸ್ಟಾರ್ಟ್ ಆಗಲಿಲ್ಲ. ಮೂವರು ಕಳ್ಳರು ಸೇರಿ ಕಾರನ್ನು 17 ಕಿಲೋಮೀಟರ್ ದೂರ ತಳ್ಳಿಕೊಂಡು ಹೋಗಿದ್ದರು. ಸೋಮವಾರ ಕಾರು ಕಳ್ಳತದ ಪ್ರಕರಣ ಬೆಳಕಿಗೆ ಬಂದಿತು. ಕಾರು ಕಳ್ಳತನದಲ್ಲಿ ಭಾಗಿಯಾಗಿದ್ದ ಈ ಮೂವರು ಕಳ್ಳರನ್ನು ಮಂಗಳವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.

22 ರಂದು ನಡೆದಿತ್ತು ಕಾರು ಕಳ್ಳತನ: ಕಾನ್ಪುರ ನಗರದ ಬರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದಬೌಲಿ ಪ್ರದೇಶದಿಂದ ಮೇ 22 ರಂದು ರಾತ್ರಿ ಮಾರುತಿ ವ್ಯಾನ್ ಕಾರನ್ನು ಕಳ್ಳತನ ಮಾಡಲಾಗಿದೆ. ಈ ಕಾರು ಸ್ಟಾರ್ಟ್ ಆಗದಿದ್ದಾಗ , 17 ಕಿಲೋಮೀಟರ್ ವರೆಗೆ ತಳ್ಳಿ ಕಳ್ಳರು ಕದ್ದೊಯ್ದಿದ್ದಾರೆ. ಇದಾದ ಬಳಿಕ ಕಾರನ್ನು ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದಾರೆ. ಬಳಿಕ ಅಲ್ಲಿಂದ ಕಾರನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ವಿವಿಧ ವಾಹನದ ಪಾರ್ಟ್​ಗಳನ್ನು ಬದಲಿಸಿ ಫಿಕ್ಸ್ ಮಾಡಲು ಆರಂಭಿಸಿದ್ದಾರೆ. ಕೆಲವು ಮಾಹಿತಿದಾರರು ನೀಡಿದ ಸುಳಿವು ಆಧರಿಸಿ ಜಾಲ ಬೀಸಿದ ನಜೀರಾಬಾದ್ ಠಾಣೆ ಪೊಲೀಸರು ಕಾರು ಸೇರಿದಂತೆ ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವರೂಪ್ ನಗರ ಎಸಿಪಿ ಬ್ರಜ್ ನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಾಹನ ಕಳ್ಳರನ್ನು ನಜೀರಾಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಒಬ್ಬ ಕಳ್ಳನು ತಮ್ಮ ಹೆಸರನ್ನು ಹಳೇ ಕಾನ್ಪುರದ ರಾಣಿ ಘಾಟ್‌ನ ನಿವಾಸಿ ಸತ್ಯಂ ಕುಮಾರ್ ಬಹಿರಂಗ ಪಡಿಸಿದ್ದಾರೆ. ಇನ್ನೊಬ್ಬನು ಅಮನ್ ಗೌತಮ್ ಪ್ರದೇಶದ ಗಾಡ್ರಿಯನ್ ಪೂರ್ವಾ ನಿವಾಸಿ ಎಂದು ತನ್ನ ಹೆಸರು ಹೇಳಿದ್ದಾನೆ. ಮೂರನೆಯ ಸಹಚರ ಅಮಿತ್ ವರ್ಮಾ ಬ್ರಹ್ಮನಗರದ ನಿವಾಸಿ ಎಂದು ಕಳ್ಳರು ಹೆಸರು ಬಹಿರಂಗ ಪಡಿಸಿದ್ದಾರೆ. ಆರೋಪಿಗಳು ನಿದರ್ಶನದ ಮೇರೆಗೆ ಪೊಲೀಸರು ಕದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಬ್ಬರು ಬಿಟೆಕ್ ವಿದ್ಯಾರ್ಥಿಗಳಿಂದ ಕೃತ್ಯ: ಆರೋಪಿ ಸತ್ಯಂ ಕುಮಾರ್ ಬಿಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ವೆಬ್‌ಸೈಟ್ ಮಾಡಿಕೊಂಡು ಆನ್‌ಲೈನ್ ಪ್ರಚಾರದಿಂದ ಹಣ ಗಳಿಸುತ್ತಿದ್ದ. ಅದೇ ವೇಳೆ ಎರಡನೇ ಆರೋಪಿ ಅಮನ್ ಸಹ ಬಿ.ಟೆಕ್ ವಿದ್ಯಾರ್ಥಿ ಸತ್ಯಂನೊಂದಿಗೆ ಸೇರಿ ವೆಬ್​ಸೈಟ್ ಕೆಲಸ ನಿರ್ವಹಿಸುತ್ತಿದ್ದನು. ಮೂರನೇ ಆರೋಪಿ ಅಮಿತ್ ವರ್ಮಾ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದನು ಎಂದು ಎಸಿಪಿ ಬ್ರಜ್ ನಾರಾಯಣ್ ತಿಳಿಸಿದ್ದಾರೆ.

ಪಾನ್ ಅಂಗಡಿಯಿಂದ ಶುರುವಾದ ಗೆಳೆತನ: ಪಾನ್ ಅಂಗಡಿ ಎದುರು ಈ ಮೂವರು ಆಗಾಗ್ಗೆ ಸೇರುತ್ತಿದ್ದರು. ಅಲ್ಲಿಂದ ಮೂವರಲ್ಲಿ ಗೆಳೆತನ ಬೆಳೆದು ಒಳ್ಳೆಯ ಗೆಳೆಯರಾದರು. ಮೂವರೂ ಬೇಗ ಶ್ರೀಮಂತರಾಗಲು ಕಳ್ಳತನದ ಯೋಜನೆ ರೂಪಿಸಿದ್ದರು. ಇವರೊಂದಿಗೆ ಇದ್ದ ಇನ್ನೊಬ್ಬ ಕಳ್ಳ ರೋಶನ್‌ ತಲೆಮೆರೆಸಿಕೊಂಡಿದ್ದು,ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಬಂಧಿತ ಮೂವರು ಆರೋಪಿಗಳಿಂದ ಎರಡು ದ್ವಿಚಕ್ರವಾಹನ ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ನಜೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂಓದಿ:ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ವಿಲೇಜ್ ಫೀಲ್ಡ್ ಅಸಿಸ್ಟೆಂಟ್​​: ಬಾಡಿಗೆ ಮನೆಯಲ್ಲಿ ಪತ್ತೆಯಾಯ್ತು 17 ಕೆಜಿ ಚಿನ್ನಾಭರಣ, ಕೋಟಿ ಹಣ!

ABOUT THE AUTHOR

...view details