ಶಿಮ್ಲಾ:ಕಾರೊಂದು ಎತ್ತರದ ರಸ್ತೆಯಿಂದ ಸ್ಕಿಡ್ ಆಗಿ ಕೆಳಗಿರುವ ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ(Shimla in Himachal Pradesh) ನಡೆದಿದೆ.
ಕಾರಿನಲ್ಲಿ ತೆರಳುತ್ತಿರುವಾಗ ಕೋತಿಯೊಂದು ಅಡ್ಡ ಬಂದಿದೆ. ಅದನ್ನು ರಕ್ಷಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಶಿಮ್ಲಾ ನಗರದಲ್ಲಿರುವ ಹೋಟೆಲ್ ಹಿಮ್‌ಲ್ಯಾಂಡ್‌ನ ಪಾರ್ಕಿಂಗ್ ಬಳಿ ಈ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.