ಗಾಜಿಯಾಬಾದ್ (ಉತ್ತರಪ್ರದೇಶ) :ಗಾಜಿಯಾಬಾದ್ನಲ್ಲಿ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿ ಮೂವರು ಸ್ನೇಹಿತರು ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದ ಕಾರು ಏಕಾಏಕಿ ಕಾಲುವೆಗೆ ಬಿದ್ದಿದ್ದು, ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೂವರೂ ಸ್ನೇಹಿತನ ತಂಗಿಯ ಮದುವೆಗೆ ಹೋಗಿ ಮನೆಗೆ ವಾಪಸಾಗುತ್ತಿದ್ದರು.
ಘಟನೆ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಮೂಲಕ ಕಾರನ್ನು ಹೊರ ತೆಗೆದಿದ್ದಾರೆ. ಮೂವರು ಯುವಕರನ್ನು ಗುರುತಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 1:30ರ ಸುಮಾರಿಗೆ ಈ ದುರಂತ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ವಾಹನಕ್ಕಾಗಿ ಹುಡುಕಾಟ ಆರಂಭಿಸಿ, ಕ್ರೇನ್ ಮೂಲಕ ಮೂವರು ಯುವಕರೊಂದಿಗೆ ಕಾರನ್ನು ಹೊರ ತೆಗೆಯಲಾಯಿತು.
ಯುವಕರನ್ನು ಲಲಿತ್, ದೇಬು ಮತ್ತು ಸೋನು ಎಂದು ಗುರುತಿಸಲಾಗಿದೆ. ಮೂವರು ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದರು ಎಂದು ಪೊಲೀಸರಿಗೆ ತಿಳಿದು ಬಂದಿದೆ.
ಇದನ್ನೂ ಓದಿ:ಜಾರ್ಖಂಡ್ನಲ್ಲಿ ಐಇಡಿ ಸ್ಫೋಟ: ಕೋಬ್ರಾ ಪಡೆ ಯೋಧರಿಬ್ಬರಿಗೆ ಗಾಯ
ಪೊಲೀಸರು ತನಿಖೆ ಆರಂಭಿಸಿದಾಗ, ಈ ಮೂವರು ಸ್ನೇಹಿತರು ತಮ್ಮ ಮತ್ತೊಬ್ಬ ಸ್ನೇಹಿತನ ಸಹೋದರಿಯ ವಿವಾಹ ನಡೆಯುತ್ತಿದ್ದ ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದ ವಿಷಯ ತಿಳಿದು ಬಂದಿದೆ. ಮೂವರು ಸ್ನೇಹಿತರು ಹಿಂತಿರುಗುವಾಗ ಈ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ತನಿಖೆ ಮುಂದುವರಿದಿದೆ.