ಕರ್ನಾಟಕ

karnataka

ETV Bharat / bharat

ಹೆದ್ದಾರಿಯಲ್ಲಿ ಟ್ರಾಫಿಕ್​ ಜಾಮ್​ : ನೀಟ್​ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಪರದಾಡಿದ ವಿದ್ಯಾರ್ಥಿನಿ - ಈಟಿವಿ ಭಾರತ ಕನ್ನಡ

ನೀಟ್​ ಪರೀಕ್ಷಾ ಬರೆಯಲು ಆಗಮಿಸುತ್ತಿದ್ದ ವಿದ್ಯಾರ್ಥಿನಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

car-stuck-in-traffic-student-missed-neet-exam-by-four-minutes-in-kerala
ಹೆದ್ದಾರಿ ಟ್ರಾಫಿಕ್​ ಜಾಮ್​ : ನೀಟ್​ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಪರದಾಡಿದ ವಿದ್ಯಾರ್ಥಿನಿ

By

Published : May 8, 2023, 7:44 PM IST

ಕಣ್ಣೂರು (ಕೇರಳ) : ಭಾನುವಾರ ನೀಟ್​​ ಪರೀಕ್ಷೆ ಬರೆಯಲು ಆಗಮಿಸುತ್ತಿದ್ದ ವಿದ್ಯಾರ್ಥಿನಿ ಟ್ರಾಫಿಕ್​ ಜಾಮ್​​ನಲ್ಲಿ ಸಿಲುಕಿ ಪರದಾಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿಯೋರ್ವರು ನೀಟ್​ ಪರೀಕ್ಷೆ ಬರೆಯಲು ಆಗಮಿಸುವ ವೇಳೆ ಕಣ್ಣೂರು - ಪಯ್ಯನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್​ ಲಾರಿ ಪಲ್ಟಿಯಾಗಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಿದ್ಯಾರ್ಥಿನಿ ತಡವಾಗಿ ನೀಟ್​ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಸಂಚಾರ ದಟ್ಟಣೆಯಿಂದಾಗಿ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗಿಲ್ಲ.

ಕೂತುಪರಂಬ ನಿರ್ಮಲಗಿರಿ ನಿವಾಸಿಯಾದ ನಯನಾ ಜಾರ್ಜ್​ ನೀಟ್​ ಪರೀಕ್ಷೆ ಬರೆಯಲು ಪಯ್ಯನ್ನೂರಿನ ಪೆರುಂಬಾ ಲತೀಫಿಯಾ ಇಂಗ್ಲಿಷ್​​ ಮೀಡಿಯಂ ಸ್ಕೂಲ್​​ಗೆ ಆಗಮಿಸುತ್ತಿದ್ದರು. ಇವರು ಮಧ್ಯಾಹ್ನ 12 ಗಂಟೆ ಒಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಈ ಹಿನ್ನೆಲೆ ನಯನಾ ಜಾರ್ಜ್ ತನ್ನ ತಾಯಿ ರೋಸ್ ಮೇರಿ ಮತ್ತು ತಂದೆ ಜಾರ್ಜ್​ ಅವರೊಂದಿಗೆ ಕಾರಿನಲ್ಲಿ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದರು.

ಇವರ ಮನೆಯಿಂದ ಪಯ್ಯನ್ನೂರಿಗೆ 62 ಕಿ.ಮೀ ದೂರವಿದೆ. ಸಾಮಾನ್ಯವಾಗಿ ಇವರ ಮನೆಯಿಂದ ಎರ​ಡು ಗಂಟೆಗಳಲ್ಲಿ ಪಯ್ಯನ್ನೂರು ತಲುಪಬಹುದು. ಬೇಗವೇ ಹೊರಟಿದ್ದರಿಂದ 12 ಗಂಟೆ ಒಳಗೆ ಪಯ್ಯನ್ನೂರು ತಲುಪಬಹುದೆಂದು ನಯನಾ ಜಾರ್ಜ್​ ತಂದೆ ಲೆಕ್ಕ ಹಾಕಿದ್ದಾರೆ. ಆದರೆ ಇವರು ಕಣ್ಣೂರು ಚಾಲ ಕ್ರಾಸ್​ ತಲುಪುತ್ತಲೇ ಇವರ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. 50 ಕಿ.ಮೀ ಕ್ರಮಿಸಿದ್ದ ಅವರು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಎಯಿಲ್​​ ಎಂಬಲ್ಲಿಗೆ ತಲುಪಿದ್ದಾರೆ. ಎಯಿಲೋಡ್​ ಎಂಬಲ್ಲಿ ಕಂಟೇನರ್​ ಲಾರಿ ಪಲ್ಟಿಯಾಗಿದ್ದು, ಇಲ್ಲಿ ಹಲವು ಗಂಟೆಗಳ ಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಅಲ್ಲದೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಇಲ್ಲಿ ನಡೆಯುತ್ತಿದೆ.

ಎಯಿಲೋಡ್​​ನಿಂದ ಪಯ್ಯನ್ನೂರಿಗೆ ಕೇವಲ ಐದು ಕಿ.ಮೀ ದೂರ ಇದ್ದು, ಈ ವೇಳೆ ನಯನಾ ಜಾರ್ಜ್​ 12.45ರವರೆಗೆ ಕಾದರೂ ವಾಹನ ದಟ್ಟಣೆ ಕಡಿಮೆಯಾಗಿಲ್ಲ. ಬಳಿಕ ವಿದ್ಯಾರ್ಥಿನಿ ನಯನಾ ಮತ್ತು ಆಕೆಯ ತಾಯಿ ಕಾರಿನಿಂದ ಇಳಿದು ಓಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಲು ನಿರ್ಧರಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಓಡುತ್ತಿರಬೇಕಾದರೆ ಬೈಕ್​ ಸವಾರನೊಬ್ಬ ವಿದ್ಯಾರ್ಥಿನಿ ನಯನಾ ಜಾರ್ಜ್​ಗೆ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸಹಾಯ ಮಾಡಿದ್ದಾನೆ. ಆದರೂ ವಿದ್ಯಾರ್ಥಿನಿ ನಾಲ್ಕು ನಿಮಿಷ ತಡವಾಗಿ ಪರೀಕ್ಷೆಗೆ ಹಾಜರಾಗಿದ್ದಾಳೆ.

ತಾಯಿ ಪರೀಕ್ಷಾ ಕೇಂದ್ರಕ್ಕೆ ತಲುಪುತ್ತಲೇ ತಲೆ ತಿರುಗಿ ಬಿದ್ದಿದ್ದರು. ಬಳಿಕ ಆಗಮಿಸಿದ ನಯನಾ ಅವರ ತಂದೆ ರೋಸ್​ ಮೇರಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಒಂದು ವರ್ಷ ಕಾಲ ಕೋಚಿಂಗ್​ ನಂತರ ನಯನಾ ಜಾರ್ಜ್ ನೀಟ್​ ​ಪರೀಕ್ಷೆ ಬರೆದರು. ಇದೇ ರೀತಿ ಟ್ರಾಫಿಕ್​ನಿಂದಾಗಿ ಹಲವು ವಿದ್ಯಾರ್ಥಿಗಳು ನೀಟ್​ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಬ್ಯಾಂಕ್​ ಆಫ್​ ಬರೋಡಾದಲ್ಲಿ ಉದ್ಯೋಗಾವಕಾಶ; 157 ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details