ಬಂಕುರಾ (ಪಶ್ವಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆಯುತ್ತಿರುವ ಹಿಂಸಾಚಾರ ಮುಂದುವರಿದಿದ್ದು, ಇಂದು ಬಂಕೂರ ಬಿಜೆಪಿ ಸಂಸದರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ.
ಸಂಸದ ಸುಭಾಷ್ ಸರ್ಕಾರ್ ಕಾರಿನಲ್ಲಿ ಆಗಮಿಸುವ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಕಾರಿನ ಗಾಜು ಪುಡಿಯಾಗಿವೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಂಕುರಾ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟಲ್‌ಖುರಿ ಗ್ರಾಮದಲ್ಲಿ ಕಿಸನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದ ವೇಳೆ ಹಿಂದಿನಿಂದ ದಾಳಿ ನಡೆದಿದೆ.