ನೀಲಗಿರಿ(ತಮಿಳುನಾಡು): ಕೋವಿಡ್ ಅಬ್ಬರದಿಂದ ಎರಡು ವರ್ಷಗಳ ಕಾಲ ಸಿನಿಮಾ ಶೂಟಿಂಗ್ ಸ್ಥಗಿತವಾಗಿದ್ದವು. ಈಗ ಕೊರೊನಾದಿಂದ ಚೇತರಿಕೆ ಕಂಡಿದ್ದರಿಂದ ಮತ್ತೇ ಶೂಟಿಂಗ್ ಆರಂಭವಾಗಿವೆ. ತಮಿಳುನಾಡಿನ ಊಟಿ, ನೀಲಗಿರಿ, ಕೂನ್ನೂರು ಸುತ್ತಮುತ್ತ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿವೆ.
ವಿಡಿಯೋ - ಬಾನೆತ್ತರಕ್ಕೆ ಹಾರಿ ಚಹಾ ತೋಟದಲ್ಲಿ ಬಿದ್ದ ಕಾರು.. ಏನಿದರ ಅಸಲಿಯತ್ತು?
ಕಳೆದ 10 ದಿನಗಳಿಂದ ಸಿನಿಮಾ ತಂಡ ಶೂಟಿಂಗ್ ಮಾಡುತ್ತಿದ್ದು, ಇಂದು ತುತುರ್ಮಟ್ಟಂ ಪ್ರದೇಶದ ಚಹಾ ತೋಟದಲ್ಲಿ ಸಾಹಸ ದೃಶ್ಯವನ್ನ ಚಿತ್ರೀಕರಿಸುತ್ತಿದೆ. ಈ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದಲ್ಲಿ ಕಾರೊಂದು ಬಾನೆತ್ತರಕ್ಕೆ ಹಾರಿ ಚಹಾ ತೋಟದಲ್ಲಿ ಬಿದ್ದಿದೆ.
ಇಂದು ಕೂಡಾ ಟಾಲಿವುಡ್ ನಟ ನಾಗಾರ್ಜುನ ಅಭಿನಯಿಸಿತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕಳೆದ ಹತ್ತು ದಿನಗಳಿಂದ ಸಿನಿಮಾ ತಂಡ ಶೂಟಿಂಗ್ ಮಾಡುತ್ತಿದ್ದು, ಇಂದು ತುತುರ್ಮಟ್ಟಂ ಪ್ರದೇಶದ ಚಹಾ ತೋಟದಲ್ಲಿ ಸಾಹಸ ದೃಶ್ಯವನ್ನ ಚಿತ್ರೀಕರಿಸುತ್ತಿದೆ. ಈ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದಲ್ಲಿ ಕಾರೊಂದು ಬಾನೆತ್ತರಕ್ಕೆ ಹಾರಿ ಚಹಾ ತೋಟದಲ್ಲಿ ಬಿದ್ದಿದೆ.
ಇದನ್ನು ಕಂಡು ಸಮೀಪದ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಚಹಾ ತೋಟದ ಕಾರ್ಮಿಕರು ಕಿರುಚಿಕೊಂಡು ಓಡಿಹೋಗಿದ್ದಾರೆ. ಆದರೆ ಅದು ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಎಂದು ತಿಳಿದ ಮೇಲೆ ನಿಟ್ಟುಸಿರುಬಿಟ್ಟು ಮರಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.