ಕರ್ನಾಟಕ

karnataka

ETV Bharat / bharat

ಕಾಲುವೆಗೆ ಬಿದ್ದ ಕಾರು.. ಒಂದೇ ಕುಟುಂಬ ನಾಲ್ವರು ಸಾವು - ಒಂದೇ ಕುಟುಂಬ ನಾಲ್ವರು ಸಾವು

ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಸಹಿತ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Car fell into canal in Panjab
ಕಾಲುವೆಗೆ ಬಿದ್ದ ಕಾರು.. ಒಂದೇ ಕುಟುಂಬ ನಾಲ್ವರು ಸಾವು

By

Published : Dec 6, 2022, 7:28 AM IST

ಅಂಬಾಲಾ(ಹರಿಯಾಣಾ):ಅಂಬಾಲಾ ಜಿಲ್ಲೆಯ ಇಸ್ಮಾಯಿಲ್‌ಪುರ ಗ್ರಾಮದ ಬಳಿ ಕಾರು ನರ್ವಾನ ಕಾಲುವೆಗೆ ಬಿದ್ದು, ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಕುಲ್ಬೀರ್ ಸಿಂಗ್(40), ಪತ್ನಿ ಕಮಲ್ಜಿತ್ ಕೌರ್, ಮಗಳು ಜಶನ್ಪ್ರೀತ್ ಕೌರ್(16) ಮತ್ತು ಖುಷ್ದೀಪ್ ಕೌರ್(11) ಎಂದು ಗುರುತಿಸಲಾಗಿದೆ. ನಾಗಗಲ್​ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಸಿವಿಲ್​ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಕುಲ್ಬೀರ್ ಸಿಂಗ್ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಮಾರುತಿ ಕಾರು ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನರ್ವಾನ ಕಾಲುವೆಗೆ ಬಿದ್ದಿದ್ದು, ಸೋಮವಾರ ಬೆಳಗ್ಗೆ ಮಾಹಿತಿ ಲಭಿಸಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಕಾರು ಸಹಿತ ನಾಲ್ಕೂ ಮೃತದೇಹಗಳನ್ನು ಹೊರತೆಗೆಯಲಾಯಿತು. ಅಪಘಾತಕ್ಕೆ ಕಾರಣ ತನಿಖೆಯಿಂದ ತಿಳಿಯಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಲಾರಿ-ಬಸ್​ ನಡುವೆ ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ

ABOUT THE AUTHOR

...view details