ಕರ್ನಾಟಕ

karnataka

ETV Bharat / bharat

ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಸಾವು

ಕೊತ್ವಾಲಿ ದೇಹತ್ ಪೊಲೀಸ್ ಠಾಣಾ ವ್ಯಾಪ್ತಿಯ ವೇವರ್ ಬ್ಯಾರೇಜ್‌ನಲ್ಲಿ ಕಾರೊಂದು ಕಾಲುವೆಗೆ ಬಿದ್ದಿದೆ.

By

Published : Jul 24, 2023, 4:15 PM IST

ಉತ್ತರ ಪ್ರದೇಶದಲ್ಲಿ ಕಾಲುವೆಗೆ ಬಿದ್ದ ಕಾರು
ಉತ್ತರ ಪ್ರದೇಶದಲ್ಲಿ ಕಾಲುವೆಗೆ ಬಿದ್ದ ಕಾರು

ಇಟಾಹ್‌ (ಉತ್ತರ ಪ್ರದೇಶ) : ಇಂದು ಬೆಳಗ್ಗೆ ಕಾರೊಂದು ಕಾಲುವೆಗೆ ಬಿದ್ದಿದ್ದು, ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಕೊತ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ವೇವರ್ ಬ್ಯಾರೇಜ್‌ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟವರೆಲ್ಲ ಕಾಸ್‌ಗಂಜ್‌ನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ಇಟಾಹ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಕರೆ ತರುವಾಗ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಈ ವೇಳೆ ಕಾರಿನೊಳಗೆ ಇದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಪುರುಷರು ಮೃತಪಟ್ಟಿದ್ದಾರೆ. ಇನ್ನು ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಒಂದು ಗಂಟೆಯ ಶ್ರಮದಾನದ ಬಳಿಕ ಕಾರಿನ ಸಮೇತ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಫ್ಲೈ ಓವರ್‌ ಮೇಲೆ ಸರಣಿ ರಸ್ತೆ ಅಪಘಾತ : ಗುಜರಾತ್​ನ ಅಹಮದಾಬಾದ್​ನಲ್ಲಿ ಹಾದು ಹೋಗುವ ಸರ್ಕೇಜ್‌ - ಗಾಂಧಿ ನಗರ ಹೆದ್ದಾರಿಯ ಇಸ್ಕಾನ್‌ ಫ್ಲೈ ಓವರ್‌ ಮೇಲೆ ಜುಲೈ 19 ರಂದು ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿತ್ತು. ಮೊದಲಿಗೆ ಮಹೀಂದ್ರಾ ಕಾರು ಮತ್ತು ಡಂಪರ್ ನಡುವೆ ಸಣ್ಣ ಅಪಘಾತವಾಗಿತ್ತು. ಸುದ್ದಿ ತಿಳಿದು ಡಿಕ್ಕಿಯಾಗಿದ್ದನ್ನು ನೋಡಲು ಫ್ಲೈಓವರ್‌ ಮೇಲೆ ನಿಂತಿದ್ದ ಜನರಿಗೆ ಅಂದಾಜು 160 ಕಿಮೀ ವೇಗದಲ್ಲಿ ಬಂದ ಜಾಗ್ವಾರ್​ ಕಾರು ಗುದ್ದಿದ್ದು, ಸ್ಥಳದಲ್ಲೇ 6 ಮಂದಿ ಪ್ರಾಣ ಕಳೆದುಕೊಂಡರೆ, ತೀವ್ರವಾಗಿ ಗಾಯಗೊಂಡಿದ್ದ ಮೂವರು ಸೇರಿ ಒಟ್ಟು 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಮೃತರಲ್ಲಿ ಪೊಲೀಸ್​, ಗೃಹ ರಕ್ಷಕ ದಳ ಸಿಬ್ಬಂದಿ ಕೂಡ ಸೇರಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ :ಕುಡಿದ ಮತ್ತಿನಲ್ಲಿ ರಸ್ತೆ ಬಿಟ್ಟು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಭೂಪ.. ವಿಡಿಯೋ

ಮಹಿಳೆಯರ ಮೇಲೆ ಹರಿದ ಕಾರು: ತಮಿಳುನಾಡಿನ ವಿಲ್ಲುಪ್ಪುರಂ ಜಿಲ್ಲೆಯ ಕೀಜುಪುತುಪಟ್ಟಿ ಸಮೀಪದ ಜಂಕ್ಷನ್‌ನಲ್ಲಿನಿಂತಿದ್ದ ಜನರ ಗುಂಪಿನ ಮಧ್ಯೆ ಕಾರೊಂದು ನುಗ್ಗಿದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟಿದ್ದರು. ಇದಲ್ಲದೇ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಇದೇ ವೇಳೆ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸುವುದರ ಮೂಲಕ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಜೊತೆಗೆ ಗಾಯಾಳುಗಳಿಗೂ ನಗದು ನೆರವು ನೀಡುವುದಾಗಿ ಪ್ರಕಟಿಸಿದ್ದರು.

ಇದನ್ನೂ ಓದಿ :ಫ್ಲೈಓವರ್‌ ಮೇಲೆ ನಿಂತು ಅಪಘಾತ ವೀಕ್ಷಿಸುತ್ತಿದ್ದವರಿಗೆ 160 ಕಿಮೀ ವೇಗದಲ್ಲಿ ಬಂದು ಗುದ್ದಿದ ಕಾರು; 9 ಮಂದಿ ದಾರುಣ ಸಾವು!

ABOUT THE AUTHOR

...view details