ವಿಶಾಖಪಟ್ಟಣಂ: ಚಾಲಕನೊಬ್ಬ ನಿದ್ರೆ ಗುಂಗಿನಲ್ಲಿ ವೇಗವಾಗಿ ಕಾರು ಚಲಾಯಿಸಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ವಿದ್ಯುತ್ ಕಂಬದ ನಡುವೆ ಸಿಲುಕೊಂಡಿರುವ ಘಟನೆ ವೆಂಕಟಾಪುರಂ - ರಾಂಬಿಲ್ಲಿ ರಸ್ತೆಯ ಮೋಟುರುಪಾಲೆಂನಲ್ಲಿ ಗುರುವಾರ ನಡೆದಿದೆ.
ಓದಿ:ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಎಂದು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಸಿಎಂ ಬೊಮ್ಮಾಯಿ
ಚಾಲಕ ಒಬ್ಬನೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ ಅಪಘಾತದಲ್ಲಿ ಹಸು ಸಾವನ್ನಪ್ಪಿದ್ದಕ್ಕೆ 30 ಸಾವಿರ ರೂ.ಪರಿಹಾರ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಅಚ್ಯುತಪುರಂ ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ