ಕರ್ನಾಟಕ

karnataka

ETV Bharat / bharat

ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತ ; ಮೂವರು ಸಾವು, ಇಬ್ಬರಿಗೆ ಗಾಯ - ಈಟಿವಿ ಭಾರತ ಕನ್ನಡ

ಕಾರೊಂದು ಕ್ಯಾಂಟರ್​ಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

car-collided-with-tanker-and-three-died
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತ ; ಮೂವರು ಸಾವು, ಇಬ್ಬರಿಗೆ ಗಾಯ

By

Published : Nov 27, 2022, 7:30 PM IST

ಮುಜಾಫರ್​ನಗರ(ಉತ್ತರಪ್ರದೇಶ):ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ದಂಪತಿ ಹಾಗೂ ಅವರ ಸೋದರ ಸಂಬಂಧಿ ಎರಡು ವರ್ಷದ ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸರಕುಗಳನ್ನು ತುಂಬಿದ್ದ ಕ್ಯಾಂಟರ್ ರಾತ್ರಿ ಹರಿದ್ವಾರದಿಂದ ದೆಹಲಿ ಕಡೆಗೆ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದೆ. ಈ ವೇಳೆ ದೆಹಲಿಯಿಂದ ವೇಗವಾಗಿ ಬರುತ್ತಿದ್ದ ಕಾರು ಕ್ಯಾಂಟರ್​​​ಗೆ ಡಿಕ್ಕಿ ಹೊಡೆದಿದ್ದು, ಕಾರು ಜಖಂಗೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಾಹಿತಿಯನ್ನು ಪಡೆದಿದ್ದಾರೆ.

ಅಪಘಾತದಲ್ಲಿ ಮಧ್ಯಪ್ರದೇಶದ ಗೌತಮ್ ಬುದ್ಧ ನಗರದ ನಿವಾಸಿ ಆಶಿಶ್ ಅವಸ್ತಿ(28), ಪತ್ನಿ ನೂಪುರ್ ಅವಸ್ತಿ (26) ಹಾಗೂ ಸೋದರ ಸಂಬಂಧಿ ದೀಪಕ್ ಅವಸ್ತಿ ಅವರ ಪುತ್ರಿ ಕಾಶ್ಮೀ(2) ಮೃತಪಟ್ಟಿದ್ದಾರೆ. ಗಾಯಗೊಂಡ ದೀಪಕ್ ಅವಸ್ತಿ ಮತ್ತು ಪತ್ನಿ ರತ್ನಾ ತ್ರಿಪಾಠಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಕ್ಯಾಂಟರ್ ಚಾಲಕ ಮತ್ತು ಸಹಾಯಕ ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಸಹೋದ್ಯೋಗಿಗಳ ನಡುವೆ ಘರ್ಷಣೆ: ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಯೋಧರು ಸಾವು

ABOUT THE AUTHOR

...view details